Sorry, your browser does not support inline SVG. Sorry, your browser does not support inline SVG. Sorry, your browser does not support inline SVG.

ರೋಗಿಗಳ ಆರೈಕೆ ಮತ್ತು ಚಿಕಿತ್ಸೆ

ಕರುಣಾಶ್ರಯದ ನುರಿತ ವೈದ್ಯಕೀಯ ಸಿಬ್ಬಂದಿ, ಉಪಶಮನಕಾರಿ ಚಿಕಿತ್ಸೆಯನ್ನು ಒಳ ರೋಗಿಗಳಿಗೂ ಮತ್ತು ಮನೆಯಲ್ಲಿನ ರೋಗಿಗಳಿಗೂ ನೀಡುತ್ತಾ ಬಂದಿದ್ದಾರೆ. ರೋಗಿಗಳ ನಿರ್ಧಾರ ಮತ್ತು ಅವರ ರೋಗ ಲಕ್ಷಣಗಳಿಗನುಗುಣವಾಗಿ ಮೇಲಿನ ಎರಡು ವಿಧಾನಗಳ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಔಷಧೀಯ ಉಪಚಾರವಲ್ಲದೆ, ರೋಗಿಗಳ ದೈಹಿಕ ಮತ್ತು ಮಾನಸಿಕ ಯಾತನೆಯನ್ನು ಉಪಶಮನಗೊಳಿಸಲು ಮಾನಸಿಕ, ಆಧ್ಯಾತ್ಮಿಕ ಸೇರಿದಂತೆ ಇತರ ಸಹಕಾರಿ ಚಟುವಟಿಕೆಗಳನ್ನು ನಡೆಸುವಲ್ಲಿ ಕರುಣಾಶ್ರಯವು ಯಶಸ್ವಿಯಾಗಿದೆ.

ಕರುಣಾಶ್ರಯದ ವೈದ್ಯರು, ನರ್ಸ್ ಗಳು ಮತ್ತು ಸಮಾಜ ಸೇವಕರು ರೋಗಿಗಳನ್ನು ಅನುಕಂಪಕ್ಕಿಂತಲೂ ಹೆಚ್ಚಾಗಿ ಪ್ರೀತಿ ಸಾಂತ್ವನಗಳಿಂದ ನೋಡಿಕೊಳ್ಳುತ್ತಾರೆ. ಕರುಣಾಶ್ರಯದ ವೈದ್ಯಕೀಯ ನಿರ್ದೇಶಕರ ಮಾರ್ಗದರ್ಶನದಲ್ಲಿ ಈ ಎಲ್ಲಾ ಚಟುವಟಿಕೆಗಳು ನಡೆಯುತ್ತವೆ. ಪ್ರತಿಯೊಬ್ಬ ರೋಗಿಯ ವೈಯಕ್ತಿಕ ಅಗತ್ಯಗಳನ್ನು ಪೂರೈಸುವುದು ಕರುಣಾಶ್ರಯದ ಪ್ರತಿಯೊಬ್ಬ ಉದ್ಯೋಗಿಯ ಆದ್ಯ ಕರ್ತವ್ಯವಾಗಿದೆ. ಕೊನೆಗಾಲದಲ್ಲಿ ರೋಗಿಗಳು ದಿನಗಳನ್ನು ಎಣಿಸುವಂತೆ ಮಾಡದೆ ಬದುಕಿನ ಘನತೆಯನ್ನು ಕಾಯ್ದುಕೊಂಡು ಶಾಂತಿಯಿಂದ ಕಳೆಯುವಂತೆ ಮಾಡುವುದೇ ಕರುಣಾಶ್ರಯದ ಮುಖ್ಯ ಗುರಿಯಾಗಿದೆ.

ಪ್ರವೇಶ ಕಾರ್ಯವಿಧಾನಗಳು

 • ರೋಗಿಗಳನ್ನು ಸೇರಿಸಲು ಬೇಕಾದ ಮಾನದಂಡಗಳುರೋಗಿಗಳ ಆರೈಕೆ ಯೋಜನೆಗಳು
 • ವಿಶ್ರಾಂತಿಧಾಮದ ಸೇವೆಗಳುಹೊರ ರೋಗಿಗಳ ವಿಭಾಗ
 • ಮಾರ್ಫೈನ್ ಲಭ್ಯತೆಆರೈಕೆ ನೀಡುವವರಿಗೆ ಬೆಂಬಲ
 • ಡಿಸ್ಚಾರ್ಜ್ ಮಾನದಂಡಗಳುರೋಗಿಯ ಸಾರಿಗೆ ಸೇವೆ

ರೋಗಿಗಳನ್ನು ಸೇರಿಸಲು ಬೇಕಾದ ಮಾನದಂಡಗಳು

ಕರುಣಾಶ್ರಯದ ಶಾಂತಿ ಸಮಾಧಾನ ಪರಿಸರದಲ್ಲಿ ಯಾವುದೇ ಹಂತದ ಕ್ಯಾನ್ಸರ್ ರೋಗಿಗಳಿಗೂ ಸ್ವಾಗತವಿದೆ, ಅವರಿಗೆ ಸ್ವಾಂತನದ ವಾತಾವರಣದಲ್ಲಿ ನೋವನ್ನು ಮರೆತು ಶಾಂತಿಯುತ ಜೀವನವನ್ನು ನಡೆಸಲು ಸಶಕ್ತರಾಗುವಂತೆ ಮಾಡುವುದೇ ಕರುಣಾಶ್ರಯದ ಧ್ಯೇಯೋಕ್ತಿಯಾಗಿದೆ. ಈ ಧ್ಯೇಯವನ್ನು ಸಾಧಿಸಲು ಕರುಣಾಶ್ರಯವು ಉಪಶಮನಕಾರಿ ಚಿಕಿತ್ಸೆಯನ್ನು ಮನೆ ಮನೆಗೆ ತಲುಪಿಸುವುದಲ್ಲದೆ, ಒಳರೋಗಿಗಳ ಶುಶ್ರೂಷೆ, ಶಿಕ್ಷಣ ಮತ್ತು ತರಬೇತಿಯನ್ನು ನೀಡುತ್ತಾ ಬಂದಿದೆ.

ಕರುಣಾಶ್ರಯದಲ್ಲಿ ಒಳರೋಗಿಗಳಾಗಿ ಪ್ರವೇಶ ಪಡೆಯಲು ಇರುವ ನಿಬಂಧನೆಗಳು :

 • ಕ್ಯಾನ್ಸರ್ ರೋಗವು ಮುಂದುವರೆದಿರುವ ರೋಗನಿರ್ಣಯ ವರದಿಗಳು ಮತ್ತು ಸಂಬಂಧಿಸಿದ ಇತರ ವೈದ್ಯಕೀಯ .
 • ಯಾವುದೇ ಚಾಲ್ತಿಯಲ್ಲಿರುವ ರೋಗನಿವಾರಕ ಚಿಕಿತ್ಸೆ ಪಡೆಯುತ್ತಿರಬಾರದು.
 • ಯೋಜನೆಯಲ್ಲಿ ಪಾಲ್ಗೊಳ್ಳುವವರು ತಮ್ಮ ಪೋಷಕರ ಸಂಪೂರ್ಣ ಜವಾಬ್ದಾರಿಯನ್ನು ಹೊರಲು ಸಿದ್ಧರಾಗಿರಬೇಕು.

ರೋಗಿಗಳ ಆರೈಕೆ ಯೋಜನೆಗಳು

ಕರುಣಾಶ್ರಯವು ಮಾನಸಿಕ ಹಾಗು ಸಾಮಾಜಿಕ ವಿಧಾನಗಳನ್ನು ಅನುಸರಿಸಿ ರೋಗಿಗಳ ಆರೈಕೆಯ ವ್ಯವಸ್ಥೆಗಳನ್ನು ಉತ್ತಮಗೊಳಿಸಿ, , ರೋಗಿಗಳ ಕಷ್ಟದ ಸಮಯದಲ್ಲಿ ಅವರೊಂದಿಗೆ ಸಮಾಲೋಚನೆಗಳನ್ನು ನಡೆಸಿ ಮಾರ್ಗದರ್ಶನ ನೀಡುತ್ತದೆ. ರೋಗಿಯ ಆರೈಕೆ ಯೋಜನೆಯು ಪ್ರತಿಯೊಬ್ಬ ರೋಗಿಗೆ ಆರೈಕೆ ನೀಡುವವರಿಂದ ಹಿಡಿದು ಕುಟುಂಬವರ್ಗದವರೆಗೂ ಮುಂದುವರೆಯುತ್ತದೆ.

ರೋಗಿಗಳ ಆರೈಕೆ ಯೋಜನೆಯು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತದೆ :

 • ರೋಗಲಕ್ಷಣ ನಿರ್ವಹಣೆ
 • ಸಲಹೆ / ಮಾರ್ಗದರ್ಶನ
 • ಭೌತಚಿಕಿತ್ಸೆ / ಮೊಬಿಲೈಸೇಶನ್
 • ಹೊಸತಿರುವು ಚಿಕಿತ್ಸೆ
 • ಕುಟುಂಬ ಸಮಾಲೋಚನೆ
 • ರೋಗಿಯನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಲು ಕುಟುಂಬದ ಸದಸ್ಯರಿಗೆ ಮಾರ್ಗದರ್ಶನ .
 • ಮನೆಯಲ್ಲಿ ಶುಶ್ರೂಷಾ ಸೇವೆಯನ್ನು ಕರುಣಾಶ್ರಯದಿಂದ ಗುಣಮುಖರಾಗಿ ಹೊರಬಂದ ಬೆಂಗಳೂರಿನಲ್ಲಿರುವ ರೋಗಿಗಳಿಗೆ

ವಿಶ್ರಾಂತಿಧಾಮದ ಸೇವೆಗಳು

ಒಳ ರೋಗಿ ಸೌಲಭ್ಯಗಳು / ಹೊರ ರೋಗಿ ವಿಭಾಗ/ ಹೊರ ರೋಗಿಗಳು

ಕರುಣಾಶ್ರಯದಲ್ಲಿ ಈಗಾಗಲೇ 73 ಒಳ ರೋಗಿಗಳಿಗೆ ದಿನವಿಡೀ ಉಪಶಮನಕಾರಿ ಚಿಕಿತ್ಸೆ ಸೇವೆಯನ್ನು ನೀಡಲಾಗುತ್ತಿದೆ. 1999ರಿಂದ ಇಲ್ಲಿಯ ವರೆಗೂ ಒಳ ರೋಗಿ ವಿಭಾಗಕ್ಕೆ ಸೇರಿದ ರೋಗಿಗಳ ಸಂಖ್ಯೆ 18,500ನ್ನು ಮೀರಿದೆ. ಒಳ ರೋಗಿಗಳ ವಿಭಾಗವು ಸುಸ್ಸಜ್ಜಿತ ಮೂಲ ಸೌಕರ್ಯಗಳೊಂದಿಗೆ ಗಂಡಸರು ಮತ್ತು ಹೆಂಗಸರ ಪ್ರತ್ಯೇಕ ವಾರ್ಡ್ ಗಳು, ಅಗತ್ಯವಾದ ಉಪಕರಣಗಳು, ಔಷಧಾಲಯ, ಅಡುಗೆ ಮನೆ, ಲಾಂಡ್ರಿ ಸೇವೆ, ಪ್ರಾರ್ಥನೆ ಮತ್ತು ಧ್ಯಾನ ಮಾಡುವ ಕೊಠಡಿಗಳು, ವಿಚಾರ ಸಂಕಿರಣ ಕೊಠಡಿಗಳು, ನರ್ಸ್ ಗಳ ವಸತಿ ನಿಲಯ ಮತ್ತು ಆಡಳಿತ ಕಛೇರಿಗಳನ್ನು ಒಳಗೊಂಡಿದೆ.

ಮನೆಯಲ್ಲಿಯೇ ಆರೈಕೆ

1995ರಲ್ಲೇ ಕರುಣಾಶ್ರಯವು ರೋಗಿಗಳ ಮನೆಯಲ್ಲಿಯೇ ಆರೈಕೆ ಪ್ರಾರಂಭಿಸಿತು, ಇಂದಿಗೂ ಅನೇಕ ರೋಗಿಗಳ ಮತ್ತು ರೋಗಿಗಳ ಮನೆಯವರ ಆಯ್ಕೆ ಇದೇ ಆಗಿದೆ. ರೋಗಿಗಳ ಮನೆಯಲ್ಲೇ ಉಪಶಮನಕಾರಿ ಚಿಕಿತ್ಸಾ ಸೇವೆಯನ್ನು ಒದಗಿಸಲು ಒತ್ತಾಸೆ ನೀಡುವ ಸಹಾಯಕರು, ಸಲಹೆಗಾರರು, ಆರೋಗ್ಯ ಸಹಾಯಕರು ಮತ್ತು ತರಬೇತಿ ಹೊಂದಿದ ಸ್ವಯಂಸೇವಕರನ್ನೊಳಗೊಂಡ ಉಪಶಮನಕಾರಿ ಚಿಕಿತ್ಸೆ ವೃತ್ತಿಪರರ ತಂಡ ತಯಾರಿರುತ್ತದೆ. ಈ ತಂಡವು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಉಪಶಮನಕಾರಿ ಚಿಕಿತ್ಸೆ ಸೇವೆಯನ್ನು ರೋಗಿಗಳಿಗೆ ನೀಡುವುದರಲ್ಲಿ ಯಶಸ್ವು ಕಂಡಿದೆ. ರೋಗಿಗಳಿಗೆ ಬೇಕಾದಲ್ಲಿ ವೈದ್ಯರೂ ಕೂಡ ಈ ತಂಡದ ಜೊತೆಯಲ್ಲಿ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಾರೆ. ಇಂದಿನವರೆಗೆ ಮನೆಯಲ್ಲಿ ಆರೈಕೆ ತೆಗೆದು ಕೊಂಡ ರೋಗಿಗಳ ಸಂಖ್ಯೆ 4500ಕ್ಕೂ ಅಧಿಕವಾಗಿದೆ. ಯಾವುದೇ ಸಮಯದಲ್ಲಿ ಸರಾಸರಿ 50 ಮಂದಿ ರೋಗಿಗಳು ಉಪಶಮನಕಾರಿ ಚಿಕಿತ್ಸೆ ಸೇವೆಯನ್ನು ಕರುಣಾಶ್ರಯದ ಮುಖಾಂತರ ಪಡೆದುಕೊಳ್ಳುತ್ತಿರುತ್ತಾರೆ.

OPD

ಹೊರ ರೋಗಿಗಳ ವಿಭಾಗ

 • ಕ್ಯಾನ್ಸರ್ ರೋಗ ಬಂದಿರುವುದನ್ನು ಖಾತರಿಗೊಳಿಸುವ ರೋಗನಿರ್ಣಯ ದಾಖಲೆಗಳು
 • ದಾಖಲಾತಿಗೆ ಬೇಕಾದ ಉಲ್ಲೇಖ ಪತ್ರಗಳು
 • ಆಧಾರ್ ಕಾರ್ಡ್ನ ಕಾಪಿ
 • ರೋಗಿಯ ಆರೈಕೆ ಮಾಡುವ ವ್ಯಕ್ತಿಗಳು, ಒಳ ರೋಗಿ/ಹೊರ ರೋಗಿ/ಡೇಕೇರ್ ನಲ್ಲಿ ಲಭ್ಯವಿರುವ ವರದಿಗಳು
 • ದಾಖಲಾತಿ ಆದ ಸ್ಲಿಪ್

ಮಾರ್ಫೈನ್ ಲಭ್ಯತೆ

ಕರುಣಾಶ್ರಯದ ನುರಿತ ಡಾಕ್ಟರ್ ಗಳ ಸಲಹೆಯ ನಂತರ ಮಾತ್ರ OPIOD ರೋಗಿಗಳಿಗೆ ನೀಡಲಾಗುವುದು. ವಿಶ್ವ ಆರೋಗ್ಯ ಸಂಸ್ಥೆ ನಿರ್ಧರಿತ ಮಾನದಂಡ (ಪೈನ್ ಲ್ಯಾಡರ್) ಇಲ್ಲಿ ಬಳಕೆಯಲ್ಲಿದೆ. ರೋಗಿಯು ಒಂದು ದಿನದ ಮಟ್ಟಿಗಾದರೂ ಕರುಣಾಶ್ರಯದಲ್ಲಿ ದಾಖಲಾಗಿದ್ದಲ್ಲಿ ಮಾತ್ರ ಆ ರೋಗಿಗೆ ಮಾರ್ಫೈನ್ ಅಥವಾ ಬೇರೆ ಒಪಿಯಾಡ್ ಗಳನ್ನು ನೀಡಲಾಗುವುದು.

ಆರೈಕೆ ನೀಡುವವರಿಗೆ ಬೆಂಬಲ

ವಿಶ್ರಾಂತಿ ಧಾಮದಲ್ಲಿ ರೋಗಿ ಮತ್ತು ಅವರ ಕುಟುಂಬದವರಿಗೆ ಕಾಡುವ ಆತಂಕವನ್ನು, ಕರುಣಾಶ್ರಯದಲ್ಲಿ ರೋಗಿಯ ಮಿಕ್ಕ ಸಮಯದ ಸದುಪಯೋಗ ಮತ್ತು ರೋಗಿಯನ್ನು ಮತ್ತೆ ಕುಟುಂಬದವರೊಂದಿಗೆ ಬೆಸೆಯುವ ಕ್ರಿಯೆಯನ್ನು ಸಕ್ರಿಯವಾಗಿ ನಡೆಸಲಾಗುತ್ತಿದೆ. BHT- ಕರುಣಾಶ್ರಯದಲ್ಲಿ, ಕ್ಯಾನ್ಸರ್ ನಂತಹ ಮಾರಕ ರೋಗದೊಡನೆ ಬರುವ ದುಃಖ ದುಮ್ಮಾನಗಳನ್ನು ಅರಿತುಕೊಂಡು, ಅದರೊಂದಿಗೆ ಬರುವ ಸವಾಲುಗಳನ್ನು ಎದುರಿಸಲು ರೋಗಿ ಹಾಗು ಅವರ ಒಡನಾಡಿಗಳಿಗೆ ಶಕ್ತಿ ನೀಡುವ ಪ್ರಕ್ರಿಯೆ ನಡೆಯುತ್ತಾ ಬಂದಿದೆ. ಕರುಣಾಶ್ರಯದ ಕಾರ್ಯಕ್ರಮಗಳು ರೋಗಿಯನ್ನೊಳಗೊಂಡು ಅವರ ಆರೈಕೆ ಮಾಡುವವರಿಗೂ ಸ್ವಾಂತನ ನೀಡುವ ಮುಖಾಂತರ, ರೋಗಿಯು ಕುಟುಂಬಕ್ಕೆ ಹೊರೆಯಲ್ಲ ಎನ್ನುವ ಸತ್ಯವನ್ನು ತಿಳಿಹೇಳಲಾಗುತ್ತದೆ. ಐದು ಜನರ ನುರಿತ ಸಮಾಜ ಸೇವಾ ತಂಡವು ನೀಡುವ ಸಲಹೆ ಸೂಚನೆಗಳನ್ನು ಅನುಸರಿಸಿ ರೋಗಿ ಮತ್ತು ಆರೈಕೆ ನೀಡುವವರಿಗೆ, ಸಾಮಾಜಿಕ ಹೊಣೆಗಾರಿಕೆಗಳ ಬಗ್ಗೆ ಅರಿವು ಮೂಡಿಸುತ್ತದೆ, ಇದರಿಂದ ರೋಗಿಯ ಮಿಕ್ಕ ಜೀವನಶೈಲಿಯು ಹೊಸ ಭರವಸೆಯೋಂದಿಗೆ ಸಹನೀಯವಾಗುತ್ತದೆ.

ಡಿಸ್ಚಾರ್ಜ್ ಮಾನದಂಡಗಳು

 • ರೋಗಿಯ ರೋಗಲಕ್ಷಣಗಳು ಉತ್ತಮವಾದಾಗ.
 • ರೋಗಿಯು ಜೀವನದ ಕೊನೆಯ ದಿನಗಳನ್ನು ಮನೆಯಲ್ಲಿ ಕಳೆಯಲು ಇಚ್ಛಿಸಿದಾಗ.
 • ಡಿಸ್ಚಾರ್ಜ್ ಮಾಡಿ ಎಂದು ತಾವಾಗಿ ಕೇಳಿಕೊಂಡಾಗ.
 • ಚಿಕಿತ್ಸೆಗೆ ಸಹಕಾರ ನೀಡದಿದ್ದಾಗ.
 • ರೋಗಿ ಅಥವಾ ಅವರ ಕಡೆಯವರಿಂದ ಕರುಣಾಶ್ರಯದ ಸಿಬ್ಬಂದಿ / ಕರುಣಾಶ್ರಯಕ್ಕೆ ಧಕ್ಕೆ ಉಂಟಾದಾಗ.
 • ವಿಶ್ರಾಂತಿ ಧಾಮದಿಂದ ಹೊರಬಂದ ರೋಗಿಗಳಿಗೆ ಕೆಲವುಬಾರಿ ತುರ್ತು ಸಹಾಯ ಬೇಕಾಗಬಹುದು. ಆರೈಕೆ ಮಾಡುವವರಿಗೆ ಮತ್ತು ರೋಗಿಗಳಿಗೆ ಸರಿಯಾದ ತರಬೇತಿ ನೀಡುವುದರಿಂದ ಅನೇಕ ರೋಗಿಗಳು ಮನೆಯಲ್ಲೇ ಚಿಕಿತ್ಸೆ ಮುಂದುವರಿಸಬಹುದಾಗಿದೆ. ಆರೋಗ್ಯ ಮತ್ತು ಆರೈಕೆ ತಂಡದ ಎಲ್ಲರೂ ಡಿಸ್ಚಾರ್ಜ್ ಯೋಜನೆಯನ್ನು ಜಾರಿಗೊಳಿಸಲು ಬದ್ಧರಾಗಿರುತ್ತಾರೆ.

ಡಿಸ್ಚಾರ್ಜ್ ಕಾರ್ಯ ವಿಧಾನ

ರೋಗಿಗೆ ನಿಗದಿಪಡಿಸಲಾದ, ಡಾಕ್ಟರ್ ಮತ್ತು ವೈದ್ಯಕೀಯ ತಂಡವು ರೋಗಿಯು ಡಿಸ್ಚಾರ್ಜ್ ಆಗಲು ಅರ್ಹನೋ ಅನರ್ಹನೋ ಎನ್ನುವುದನ್ನು ನಿರ್ಧರಿಸುತ್ತಾರೆ. ಡಿಸ್ಚಾರ್ಜ್ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಲು ಕೆಳಗಿನ ಕಾರ್ಯ ವಿಧಾನವನ್ನು ಅನುಸರಿಸಲಾಗುತ್ತದೆ:

ರೋಗಿಯನ್ನು ಡಿಸ್ಚಾರ್ಜ್ ಮಾಡುವ ಸಮಯವನ್ನು ನಿಗದಿತಗೊಳಿಸಲಾಗುತ್ತದೆ, ಈ ಕಾರ್ಯ ವಿಧಾನವು ಕೆಲವೊಮ್ಮೆ ಬೆಳಿಗ್ಗೆ 10ಕ್ಕೆ ಮುಗಿದು, ರೋಗಿಯ ಕಡೆಯವರಿಗೆ ಮನೆಗೆ ಹೋಗಲು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ ಹಲವೊಮ್ಮೆ ಡಿಸ್ಚಾರ್ಜ್ ಮಾಡುವ ಪ್ರಕ್ರಿಯೆಗೆ ಅಗತ್ಯಕ್ಕಿಂತ ಹೆಚ್ಚಿನ ಸಮಯ ಬೇಕಾಗಬಹುದು, ಇದನ್ನು ಗಮನದಲ್ಲಿಟ್ಟು ಕೊಂಡು ರೋಗಿಯನ್ನು ಮನೆಗೆ ತಲುಪಿಸುವ ವ್ಯವಸ್ಥೆಯನ್ನು ರೋಗಿಯ ಕಡೆಯವರು ಮಾಡಿಕೊಳ್ಳಬೇಕಾಗುತ್ತದೆ.

 • ರೋಗಿಯು ಡಿಸ್ಚಾರ್ಜ್ ಆಗುವ ದಿನ, ರೋಗಿಯ ಮನೆಯವರು/ ಆರೈಕೆ ನೀಡುವವರು ನಿಗದಿಗೊಂಡ ವೈದ್ಯರನ್ನು ಸಂದರ್ಶಿಸಿ ಹೋಗತಕ್ಕದ್ದು. , ಸೋಮವಾರದಿಂದ ಶನಿವಾರ ಬೆಳಿಗ್ಗೆ 10:00 ರಿಂದ ಸಂಜೆ 5:00 ರ ವರೆಗಿನ . ಕಛೇರಿಯ ಸಮಯದಲ್ಲಿ ವೈದ್ಯರು ಡಿಸ್ಚಾರ್ಜ್ ವರದಿಯನ್ನು ನೀಡುವರು.
 • ಕರುಣಾಶ್ರಯದಿಂದ ಹೊರಕಾಣಬೇಕಾದ ಸಮಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಅವಶ್ಯಕವಾಗಿರುತ್ತದೆ.ಡುವ ಮುನ್ನ ರೋಗಿಗೆ ಬೇಕಾದ ಔಷಧೋಪಚಾರ ಮತ್ತು ಮತ್ತೆ ವೈದ್ಯರನ್ನು
 • ರೋಗಿ ಇದ್ದ ಕೊಠಡಿಯಲ್ಲಿನ ಅಲಮಾರು, ಡ್ರಾಯರ್ ಗಳು, ಮತ್ತು ಮೇಜುಗಳನ್ನು ಸರಿಯಾಗಿ ಪರಿಶೀಲಿಸಿ ನಿಮ್ಮ ವಸ್ತುಗಳನ್ನು ಜವಾಬ್ದಾರಿಯಿಂದ ಕೊಂಡೊಯ್ಯಬೇಕು. ಡಿಸ್ಚಾರ್ಜ್ ನಂತರ ನಿಮ್ಮ ವಸ್ತುಗಳು ಕಾಣೆಯಾದಲ್ಲಿ ಆಸ್ಪತ್ರೆಯು ಯಾವುದೇ ಜವಾಬ್ದಾರಿಯನ್ನು ಹೊರುವುದಿಲ್ಲ. ಬೆಲೆಬಾಳುವ ಎಲ್ಲಾ ವಸ್ತುಗಳನ್ನು ಆಸ್ಪತ್ರೆಯ ಸುರಕ್ಷಾ ಕೊಠಡಿಯಿಂದ ಹಿಂದಕ್ಕೆ ಪಡೆದು ಹೊರಡಬೇಕು.
 • ರೋಗಿಯು ಹೊರಡಲು ಸಿದ್ಧರಾದ ಮೇಲೆ ಆಸ್ಪತ್ರೆಯ ಸಿಬ್ಬಂದಿಯು ಅವರನ್ನು ಹೊರಗಿನವರೆಗೂ ಬಿಟ್ಟು ಬರುತ್ತಾರೆ
 • ರೋಗಿಯನ್ನು ಕೊಂಡೊಯ್ಯಲು ಯಾರಾದರು ಬಂದಿದ್ದರೆ, ವಾಹನವನ್ನು ನಿಗದಿತ ಸ್ಥಳದಲ್ಲಿ ನಿಲ್ಲಿಸಿ, ಡಿಸ್ಚಾರ್ಜ್ ಪ್ರಕ್ರಿಯೆಗೆ ಸಹಾಯ ಮಾಡಿ ನಂತರ ರೋಗಿಯನ್ನು ಕರೆದೊಯ್ಯಬಹುದು.
 • ನೆನಪಿಡಲೇ ಬೇಕಾದ ವಿಷಯ; ಕರುಣಾಶ್ರಯದ ಉಪಶಮನಕಾರಿ ಚಿಕಿತ್ಸೆಯನ್ನು ಮತ್ತು ಅದರ ಧ್ಯೇಯವಾದ ಸುಖಕರ ಅನುಭವದ ಕೊನೆಯ ಭಾಗವಾದ ಡಿಸ್ಚಾರ್ಜ್ ಪ್ರಕ್ರಿಯೆಯು ಕೂಡ ರೋಗಿಯ ಇಚ್ಛಾನುಸಾರವೇ ನಡೆಯುತ್ತದೆ ಮತ್ತು ಇದರಲ್ಲಿ ಯಾವುದೇ / ಯಾರದೇ ಒತ್ತಾಯದ ಪ್ರಸಕ್ತಿ ಇರುವುದಿಲ್ಲ..
 • ಭಾನುವಾರ ಮತ್ತು ಸರಕಾರಿ ರಜಾ ದಿನಗಳಲ್ಲಿ ಯಾವುದೇ ಡಿಸ್ಚಾರ್ಜ್ ಮಾಡಲಾಗುವುದಿಲ್ಲ.

ರೋಗಿಯ ಸಾರಿಗೆ ಸೇವೆ

ನೆನಪಿಡಿ, ರೋಗಿಯನ್ನು ಮನೆಯವರೆಗೂ ತಲುಪಿಸಲು ಬೇಕಾದ ಸಾರಿಗೆ ವ್ಯವಸ್ಥೆಯನ್ನು ರೋಗಿಯ ಕಡೆಯವರೇ ಮಾಡಿಕೊಳ್ಳಬೇಕು. BHT- ಕರುಣಾಶ್ರಯ ತಲುಪಲೂ ಸಹ ಸ್ವಂತ ಸಾರಿಗೆಯನ್ನು ಬಳಸಬೇಕಾಗಿದೆ..

 • ಸಮಾಲೋಚನೆ
 • ಉಪಶಮನಕಾರಿ ಚಿಕಿತ್ಸೆಯಲ್ಲಿ ದೈಹಿಕ ಚಿಕಿತ್ಸೆಯ ಪಾತ್ರ
 • BHTಯಲ್ಲಿ ಉಪಶಮನಕಾರಿ ಚಿಕಿತ್ಸೆಯ ಗುರಿ
 • ಇತರೆ ಪೂರಕ ಚಿಕಿತ್ಸಾ ವಿಧಾನಗಳು

BHT- ಕರುಣಾಶ್ರಯದ ಕುಟುಂಬ ಸಲಹಾ ತಂಡವು ರೋಗಿಯ ಸಂಧರ್ಭದ ಅನುಸಾರವಾಗಿ ವಿವಿಧ ರೀತಿಯ ಸಮಾಲೋಚನಾ ಸಲಹೆಗಳನ್ನು ನೀಡುತ್ತದೆ. ಇದು ರೋಗಿಯಷ್ಟೇ ಅಲ್ಲ, ಅವರ ಮನೆಯವರಿಗೂ ಮತ್ತು ಆರೈಕೆ ನೀಡುವವರಿಗೂ ಕೂಡ ಅನ್ವಯಿಸುತ್ತದೆ, ಏಕೆಂದರೆ, ಇಂತಹ ಮಾರಕ ಖಾಯಿಲೆಯ ಮನೋ ಪರಿಣಾಮ ರೋಗಿಯಷ್ಟೇ ಅಲ್ಲದೆ ಅವರ ಮನೆಯವರ ಮೇಲೂ ನಕಾರತ್ಮಕ ಪರಿಣಾಮ ಬೀರುತ್ತದೆ.. ಕರುಣಾಶ್ರಯವು, ಎಲ್ಲಾ ಹಿನ್ನೆಲೆಗಳುಳ್ಳ, ಎಲ್ಲಾ ವಯಸ್ಸಿನವರಿಗೂ ಸಮಾಲೋಚನಾ ಸಲಹಾ ಸಭೆಗೆ ಬರಲು ಆಹ್ವಾನ ನೀಡುತ್ತದೆ, ಈ ಸಭೆಗಳಲ್ಲಿ ಕೆಳಕಂಡ ವಿಷಯಗಳ ಬಗ್ಗೆ ವಿವರವಾದ ಮಾಹಿತಿ ನೀಡಲಾಗುತ್ತದೆ.

 • ವೈಯಕ್ತಿಕ ಸಮಾಲೋಚನೆ
 • ಕೌಟುಂಬಿಕ ಸಮಾಲೋಚನೆ
 • ಮನೆ ಆರೈಕೆ ಸಮಾಲೋಚನೆ
 • ಸಂತಾಪ ಸೂಚಕ ಸಮಾಲೋಚನೆ
 • ಮನೋ ಶಿಕ್ಷಣ – ಸೈಕೋಡ್ಯೂಕೇಶನ್
 • ಸಮೂಹ ಚಿಕಿತ್ಸೆ
 • ಪಲ್ಲಟ ಕಾರ್ಯಕ್ರಮಗಳು– ಕಲೆ ಮತ್ತು ಕರಕೌಶಲ ಕಾರ್ಯಕ್ರಮ, ಆಟಗಳು, ಚಲನ ಚಿತ್ರಗಳು, ಪುಸ್ತಕಗಳು
 • ಆಧ್ಯಾತ್ಮಿಕ ಬೆಂಬಲ
 • ಸಂಬಂಧಪಟ್ಟ ಸಂಘ ಸಂಸ್ಥೆಗಳ ಪರಿಚಯ (NGOs)
 • ಪುನರ್ವಸತಿ
 • ರೋಗಲಕ್ಷಣ ನಿರ್ವಹಣೆ
 • ಸ್ವಾತಂತ್ರ್ಯವನ್ನು ಹೊಂದುವುದು

ದೈಹಿಕ ಚಿಕಿತ್ಸಾ ಮೌಲ್ಯಮಾಪನ

 • ನೋವು
 • ಊತ
 • ಸ್ನಾಯು ಶಕ್ತಿ
 • ಚಲನಶೀಲತೆ

ಚಿಕಿತ್ಸೆಯ ವಿಧಾನ ಹಾಗು ಗುರಿ

 • ಜೀವನದ ಗುಣಮಟ್ಟ ಸುಧಾರಣೆ
 • ನೋವು ನಿವಾರಣೆ
 • ಒತ್ತಡದ ನೋವು ತಡೆಗಟ್ಟುವಿಕೆ ಹಾಗು ನಿವಾರಣೆ
 • ನೋವನ್ನು ಕಡಿಮೆಮಾಡುವತ್ತ ಸಹಜ ಕಲಿಕೆ
 • ಎಲೆಕ್ಟ್ರೋಥೆರಪಿಟಿಕ್ ವಿಧಾನಗಳ ಬಳಕೆ
 • ಸಹಾಯಕ ಸಾಧನಗಳ ಬಳಕೆ

ಜೀವನಶೈಲಿಯ ಸಂಪೂರ್ಣ ಸುಧಾರಣೆಯು ಉಪಶಮನಕಾರಿ ಆರೈಕೆಯ ಮುಖ್ಯ ಗುರಿ. ಕರುಣಾಶ್ರಯವು ಈ ಕೆಳಕಂಡ ಗುರಿಗಳನ್ನು ಸಾಧಿಸಲು ಪಣ ತೊಟ್ಟಿದೆ:

 • ನೋವನ್ನು ಕನಿಷ್ಠಮಟ್ಟದಲ್ಲಿಡಲು ವೈದ್ಯಕೀಯ ಪ್ರಯೋಗಗಳ ಬಳಕೆ.
 • ರೋಗಲಕ್ಷಣಗಳನ್ನು ಗುರುತಿಸಿ ಅವುಗಳ ನಿವಾರಣೆಯೊಂದಿಗೆ ಆರೋಗ್ಯ ಸುಧಾರಣೆ
 • ಚಲನಶೀಲತೆ ಮತ್ತು ಸುರಕ್ಷತೆಗೆ ಆದ್ಯತೆಯೊಂದಿಗೆ ಸಹಕಾರ.
 • ಸಮಾಜ, ಸಂಸಾರ, ಸ್ನೇಹಿತರ ನಡುವೆ ಅರ್ಥಪೂರ್ಣ ಮಾತುಕಥೆಗೆ ಆಸ್ಪದ ನೀಡುವುದು.
 • ಕಲೆ ಸಾಕು ಪ್ರಾಣಿಗಳ ಜೊತೆಗಿನ ಸಂಪರ್ಕಚಿಕಿತ್ಸೆ, ಸಮಾಲೋಚನೆ ಮತ್ತು ಇನ್ನಿತರ ಸಾಧನೆಗಳೊಂದಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆ.
 • ರೋಗಿಗಳು ಮತ್ತು ಆರೈಕೆ ನೀಡುವವರಿಗೆ, ಅತೀ ಸಂಕಷ್ಟದ ಸಮಯದಲ್ಲಿ, ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳಲು ಮುಕ್ತ ಅವಕಾಶ.
 • ಚಿಕಿತ್ಸೆಯ ಸಮಯದಲ್ಲಿ ಪ್ರತಿಯೊಂದು ಪ್ರಕ್ರಿಯೆಯ ಬಗ್ಗೆ ಸವಿವರವಾಗಿ ರೋಗಿಗಳು ಮತ್ತು ಆರೈಕೆ ನೀಡುವವರಿಗೆ ವಿವರಣೆ ನೀಡಿ, ಸೂಕ್ತ ಆಯ್ಕೆ ಮಾಡುವತ್ತ ಮಾರ್ಗದರ್ಶನ ಮಾಡುವುದು.
 • ಸಂಗೀತ ಚಿಕಿತ್ಸೆ
 • ಸಾಕು ಪ್ರಾಣಿಗಳ ಜೊತೆಗಿನ ಸಂಪರ್ಕಚಿಕಿತ್ಸೆ
 • ಕಲೆ ಮತ್ತು ಕರ ಕುಶಲತೆಯ ಬಳಕೆ

Testimonials

“Treatment at Karunashraya is very neat, helpful, patient, kind, polite. I have no words to say how much. Nuns and nursing care help patients to be mentally silent. Counselling helps patients to be mentally prepared for their treatment of cancer. The atmosphere is very nice. Totally we are satisfied with all their loving care. I hope they continue doing this good work.”

S. Shobha

Patient’s Family Member

Patient Testimonials

“Thanks for the respect for my dying mother, “An unforgettable day” ….I am happy that mother was sent with respect. I am speechless when I have to talk about it….. Thanks for everything, is all I would like to say. I would love to contribute in some form for this cause. You are doing a great job doctor.”

Gomadhy. D

Patient’s Family Member

Gallery

ವೈದ್ಯರೊಂದಿಗೆ ಸಮಾಲೋಚನೆ :

ಸೋಮವಾರದಿಂದ ಶುಕ್ರವಾರ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ

ಶನಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರ ವರೆಗೆ

ರೋಗಿಗಳನ್ನು ಅಡ್ಮಿಟ್ ಮಾಡಿಕೊಳ್ಳುವ ಸಮಯ : ಬೆಳಗ್ಗೆ 8 ರಿಂದ ಮಧ್ಯಾಹ್ನ 1 ರ ವರೆಗೆ.

ಹೊರ ರೋಗಿಗಳ ವಿಭಾಗ: ಬೆಳಿಗ್ಗೆ 8 ರಿಂದ ಮಧ್ಯಾಹ್ನ 2ರ ವರೆಗೆ