ಕರುಣಾಶ್ರಯ ಮತ್ತು NIMHANS
ಕರುಣಾಶ್ರಯ ಸಂಸ್ಥೆಯು ಸಂಶೋಧನೆ ಮತ್ತು ಶಿಕ್ಷಣ ವಿಭಾಗಗಳಲ್ಲಿ ಒಗ್ಗೂಡಿ ಕೆಲಸ ಮಾಡಲು, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS)ಯ ಜೊತೆ ಸೆಪ್ಟೆಂಬರ್ 19, 2015ರಂದು, ಕೈಜೋಡಿಸಿತು. ಈ ಸಹಯೋಗದಿಂದ ಕರುಣಾಶ್ರಯ ಸಂಸ್ಥೆಗೆ ಅಪಾರ ಸಂಶೋಧನಾ ಸಂಪನ್ಮೂಲಗಳು, ನಿಶಿತ ವೈದ್ಯಕೀಯ ಮತ್ತು ಮಾನಸಿಕ ಆರೋಗ್ಯ ಪರಿಣತಿಗಳು ದೊರೆತಂತಾಗಿದೆ. ಇವುಗಳ ನೆರವಿನಿಂದ ಒಳ ರೋಗಿಗಳ ಶುಶ್ರೂಷಾ ವಿಧಾನಗಳು ಸುಧಾರಿತಗೊಂಡಿವೆ.
ಕರುಣಾಶ್ರಯ ಮತ್ತು ಇ-ಕ್ಯಾನ್ಸರ್
ಈಗಿನ ಡಿಜಿಟಲ್ ಯುಗಕ್ಕೆ ಸೂಕ್ತವಾಗಿ ಕರುಣಾಶ್ರಯವು ಕಾರ್ಡಿಫ್ ವಿಶ್ವವಿದ್ಯಾಲಯದ ಉಪಶಮನಕಾರಿ ಚಿಕಿತ್ಸೆ ವಿಭಾಗದ ಮತ್ತು ಇ-ಕ್ಯಾನ್ಸರ್ ನ ಜೊತೆ ಕೈಜೋಡಿಸಿ ಒಂದು ಇ-ಕಲಿಕಾ ಕೋರ್ಸನ್ನು ಪ್ರಾರಂಭಿಸಿದೆ. ಈ ಆನ್ ಲೈನ್ ಕೋರ್ಸ್ ಉಚಿತವಾಗಿದ್ದು, ಇದರಲ್ಲಿ ರೋಗ ಲಕ್ಷಣಗಳನ್ನು ಅನುಸರಿಸಿ ಅದರ ನಿರ್ವಹಣೆ, ಒಪಿಯಾಡ್ ಗಳ ಬಳಕೆ, ಸಂವಹನ ಕೌಶಲ್ಯ ಮತ್ತು ಮಕ್ಕಳ ಚಿಕಿತ್ಸಾಶಾಸ್ರ ಕ್ಕೆ ಸಂಬಂಧಿಸಿದಂತೆ , ಸುಮಾರು ಇಪ್ಪತ್ತು ಗಂಟೆಗಳ ಕಲಿಕಾ ಮಾಡ್ಯೂಲ್‌ಗಳು ಲಭ್ಯವಿದೆ.
www.ecancer.orgಕರುಣಾಶ್ರಯ & ಸೆವೆರನ್ ಹಾಸ್ಪೈಸ್, ಯುನೈಟೆಡ್ ಕಿಂಗ್ಡಮ್
ವಿಚಾರವಿನಿಮಯ, ಮಾರ್ಗಸೂಚಿಗಳು ಮತ್ತು ಶಿಕ್ಷಣದ ವಿಭಾಗಗಳಲ್ಲಿ ಸೇರಿ ಕೆಲಸ ಮಾಡಲು, ಕರುಣಾಶ್ರಯ ಸೆವೆರನ್ ಹಾಸ್ಪೈಸ್, ಯುನೈಟೆಡ್ ಕಿಂಗ್ಡಮ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಸಹಯೋಗದಿಂದ ಎರಡೂ ಸಂಸ್ಥೆಗಳ ಪಠ್ಯಕ್ರಮ, ದೈನಂದಿನ ಚಟುವಟಿಕೆಗಳು ಮತ್ತು ಸೇವೆಗಳ ಸುಧಾರಣೆ ಸಾಧ್ಯವಾಗಿದೆ. ಈ ಸಹಯೋಗದಿಂದ ವಿವಿಧ ಅನುಭವಗಳ ವಿನಿಮಯ, ಸಿಬ್ಬಂದಿಗಳ ಕಾರ್ಯಕ್ಷಮತೆ, ಮತ್ತು ಎರಡೂ ಸಂಸ್ಥೆಗಳಿಗೆ ಅಗತ್ಯವಾದ ಬೆಂಬಲದ ಸಹಯೋಗ ಸಾಧ್ಯವಾಗಿದೆ.
ಸಂಯೋಜಿತ ವಿಶ್ರಾಂತ ಧಾಮ
ಕರುಣಾಶ್ರಯ ಮತ್ತು ಬೆಂಗಳೂರು ಹಾಸ್ಪೀಸ್ ಟ್ರಸ್ಟ್ ನ ಸಹಯೋಗದಿಂದ ಬೆಂಗಳೂರಿನಲ್ಲಿರುವ ಸುಮಾರು ಏಳು ವಿಶ್ರಾಂತ ಕೇಂದ್ರಗಳಲ್ಲಿ ಸಲಹೆ ಮತ್ತು ನಿರಂತರ ವೈದ್ಯಕೀಯ ನೆರವು ನೀಡಲು ಸಾಧ್ಯವಾಗಿದೆ. ಈ ವಿಶ್ರಾಂತಿ ಧಾಮಗಳಲ್ಲಿ ಕರುಣಾಶ್ರಯ ಸಂಸ್ಥೆಯು ಉಪಶಮನಕಾರಿ ಚಿಕಿತ್ಸೆ ಬಗ್ಗೆ ತಿಳುವಳಿಕೆ ನೀಡುವುದರ ಜೊತೆಗೆ ತರಬೇತಿ ಮತ್ತು ಕಾರ್ಯಕ್ಷಮತೆ, ಗುರಿ, ಸಂಪನ್ಮೂಲಗಳು, ಸುಸ್ಥಿರತೆ ಹಾಗು ಒಳರೋಗಿ ಮತ್ತು ಮನೆಯಲ್ಲಿಯ ಚಿಕಿತ್ಸೆಗೆ ಸಂಬಂಧಪಟ್ಟ ಇತರೆ ವಿಭಾಗಗಳಲ್ಲೂ ಸಹಕಾರ ನೀಡುತ್ತಿದೆ.