Sorry, your browser does not support inline SVG. Sorry, your browser does not support inline SVG. Sorry, your browser does not support inline SVG.

ಸುದ್ದಿ ಮತ್ತು ಕಾರ್ಯಕ್ರಮಗಳು

ಕರುಣಾಶ್ರಯ ತನ್ನ ಒಳರೋಗಿಗಳಿಗೆಂದೇ ನಿಯಮಿತವಾಗಿ ಉಪಶಮನಕಾರಿ ಚಿಕಿತ್ಸೆಗೆ ಪೂರಕವಾದ ಮತ್ತು ಆಹ್ಲಾದಕರ ವಾತಾವರಣವನ್ನು ಸೃಷ್ಟಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಈ ಸಾರ್ವಜನಿಕ ಕಾರ್ಯಕ್ರಮಗಳಿಗೆ ಬರುವ ಜನರಿಗೆ ನಮ್ಮ ಕೆಲಸದ ಬಗ್ಗೆ ಪರಿಚಯವಾಗುವುದಲ್ಲದೇ, ದೇಣಿಗೆ ಸಂಗ್ರಹ ಕೂಡ ಸುಲಭವಾಗಿ ಆಗುವುದು.

ನಮ್ಮ ವಾರ್ಷಿಕ ಕಾರ್ಯಕ್ರಮಗಳ ಪಟ್ಟಿಯಲ್ಲಿ, ಕರುಣಾಶ್ರಯದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ನಮೂದಿತವಾಗಿರುತ್ತದೆ. ನಮ್ಮ ಎಲ್ಲಾ ದಾನಿಗಳು, ಪೋಷಕರು ಮತ್ತು ಶುಭಾಕಾಂಕ್ಷಿಗಳು ಇದರಲ್ಲಿ ಭಾಗವಹಿಸಿ ಈ ಕಾರ್ಯಕ್ರಮಗಳನ್ನು ಪ್ರಾಯೋಜಿಸಬಹುದು. ಹೆಚ್ಚಿನ ವಿವರಗಳಿಗಾಗಿ ಈ ಇಮೇಲ್ ವಿಳಾಸಕ್ಕೆ ಬರೆಯಿರಿ communications@karunashraya.org

  • ನಿಮ್ಮ ಸ್ವಂತ ಕಾರ್ಯಕ್ರಮ
  • ವೈಯಕ್ತಿಕ ಕೊಡುಗೆ
  • ಹಬ್ಬಗಳು/ಮುಖ್ಯ ದಿನಗಳು

ಕರುಣಾಶ್ರಯದ ಕಾಳಜಿಯನ್ನು ನೀವು ಅನೇಕವಿಧಗಳಲ್ಲಿ ಬೆಂಬಲಿಸಬಹುದು. ನೀವು ಸಾರ್ವಜನಿಕ ವಲಯದಲ್ಲಿ ಒಂದು ದೇಣಿಗೆ ಸಂಗ್ರಹಣಾ ಕಾರ್ಯಕ್ರಮವನ್ನು ಆಯೋಜಿಸಬಹುದು, ಒಂದು ಮನೋರಂಜನಾ ಕಾರ್ಯಕ್ರಮವನ್ನು ಆಯೋಜಿಸಬಹುದು ಅಥವಾ ನಿಮ್ಮ ಸ್ಥಳದಲ್ಲಿ ಒಂದು ಜಾಗೃತಿ ಅಭಿಯಾನವನ್ನು ಮಾಡುವುದರ ಮುಖಾಂತರ ನಮ್ಮ ಶ್ರಮಕ್ಕೆ ಹೆಗಲು ಜೋಡಿಸಬಹುದು.

ಕರುಣಾಶ್ರಯಕ್ಕೆ ದೇಣಿಗೆ ಕೇಳಲು ಯಾವುದೇ ಸ್ವಯಂಸೇವಕ ತಾನಾಗಿಯೇ ಸ್ವಂತ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಉದಾಹರಣೆಗೆ, ಕು. ರೋಷನೀ ತಲೇರ ರವರು ತಮ್ಮ ಕೂದಲನ್ನು ಸಂಪೂರ್ಣವಾಗಿ ತೆಗೆಸಿ ಸಾರ್ವಜನಿಕರ ಆಸಕ್ತಿ ಅವರೆಡೆ ಮತ್ತು ಕರುಣಾಶ್ರಯದ ಶ್ರಮದೆಡೆ ಸೆಳೆಯಲು ಯಶಸ್ವಿಯಾದರು. ನಾವು ನಿಮ್ಮದೇ ಆದ ವಿಧಾನದಲ್ಲಿ ಸಹಯೋಗ ನೀಡಿರೆಂದು ಕೋರುತ್ತೇವೆ.

ಕಲರಥಾನ್ – ಈ ಕಾರ್ಯಕ್ರಮದ ಮುಖಾಂತರ ಬಣ್ಣದ ಬದುಕಿನ ಅವಶ್ಯಕತೆ ಇರುವ ನಮ್ಮ ಒಳ ರೋಗಿಗಳ ಬದುಕಿಗೆ ಬಣ್ಣದ ಕನಸು ನೀಡಿ. ಈ ಕಾರ್ಯಕ್ರಮದಿಂದ ಬರುವ ಎಲ್ಲಾ ಸಂಪಾದನೆಯನ್ನು ನಾವು ಅಂತಿಮ ಘಟ್ಟದ ಕ್ಯಾನ್ಸರ್ ರೋಗಿಗಳ ಆರೈಕೆಗೆ ಮುಡಿಪಾಗಿಟ್ಟಿದ್ದೇವೆ.

ಡಾಂಡಿಯಾ ಬೀಟ್ಸ್ – ನಿಮ್ಮ ನವರಾತ್ರಿಯನ್ನು ಕರುಣಾಶ್ರಯದ ಡಾಂಡಿಯಾ ಬೀಟ್ಸ್ ಕಾರ್ಯಕ್ರಮದೊಂದಿಗೆ ಆಚರಿಸಿ. ಪ್ರೀತಿ, ಸಂತೋಷ, ಹಾಗು ನಿಮ್ಮ ಸಹಾನುಭೂತಿಯನ್ನು ನಮ್ಮ ಅಂತಿಮ ಘಟ್ಟದ ಕ್ಯಾನ್ಸರ್ ರೋಗಿಗಳ ಜೊತೆ ಹಂಚಿ ಸಂಭ್ರಮಿಸಿ.

ಹಬ್ಬಗಳ :

  • ದಸರಾ/ನವರಾತ್ರಿ
  • ದೀಪಾವಳಿ
  • ಹೋಳಿ
  • ಓಣಂ
  • ಈದ್
  • ಕ್ರಿಸ್ಮಸ್
  • ಇವುಗಳಲ್ಲದೆ ಕರ್ನಾಟಕ ರಾಜ್ಯೋತ್ಸವ (ನವೆಂಬರ್ 1)

ಪ್ರಮುಖ ದಿನಗಳು:

  • ಸ್ವಾತಂತ್ರೋತ್ಸವ/ಗಣರಾಜ್ಯೋತ್ಸವ
  • ಕರುಣಾಶ್ರಯದಲ್ಲಿ ಮೊಟ್ಟ ಮೊದಲ ಒಳ ರೋಗಿ ಸೇರಿದ ದಿನವನ್ನು ನಾವು ನಮ್ಮ ಸ್ಮಾರಕ ದಿನ (ಮೇ 1) ಎಂದು ಆಚರಿಸುತ್ತೇವೆ
  • ವಿಶ್ವ ಕ್ಯಾನ್ಸರ್ ದಿನ (ಫೆಬ್ರವರಿ 4)
  • ವಿಶ್ರಾಂತಿ ದಿನ (ಪ್ರತೀ ಅಕ್ಟೋಬರಿನ ಎರಡನೇ ಶನಿವಾರ)
  • ವಿಶ್ವ ಯೋಗ ದಿನ (ಜೂನ್ 21) ವನ್ನೂ ಕೂಡ ಆಚರಿಸುತ್ತೇವೆ