Sorry, your browser does not support inline SVG. Sorry, your browser does not support inline SVG. Sorry, your browser does not support inline SVG.

ಶಿಕ್ಷಣ ಮತ್ತು ಸಂಶೋಧನೆ

2015ರಲ್ಲಿ ಶಿಕ್ಷಣ ಮತ್ತು ಸಂಶೋಧನಾ ವಿಭಾಗವು, ನುರಿತ ವೈದ್ಯಕೀಯ ಸಿಬ್ಬಂದಿಗಳಿಗೆ ಉನ್ನತ ತರಬೇತಿ ನೀಡಿ, ಅವರಿಗೆ ಸುಧಾರಿತ ಆರೈಕೆ ನೀಡುವ ಸಿಬ್ಬಂದಿಯನ್ನಾಗಿಸುವ ಉದ್ದೇಶದೊಂದಿಗೆ, ವೈದ್ಯಕೀಯ ಸಿಬ್ಬಂದಿ, ನರ್ಸಿಂಗ್ ಮತ್ತು ಇತರ ವೈದ್ಯಕೀಯ ವೃತ್ತಿಪರರಿಗೆ ಅವರ ಕಾರ್ಯ ಕ್ಷಮತೆ ಮತ್ತು ಆರೈಕೆ ನೀಡುವ ಮಾನದಂಡಗಳನ್ನು ನಿರ್ಧರಿಸಲಾಗುತ್ತದೆ. ಹಾಗೂ ಇದರ ಬಳಕೆಯಿಂದ ಯಾವ ಮಟ್ಟದ ತರಬೇತಿ ಹಾಗೂ ಶಿಕ್ಷಣ ನೀಡಬೇಕಾಗುತ್ತದೆ ಎನ್ನುವುದು ನಿರ್ಧಾರ ಮಾಡಲಾಗುತ್ತದೆ.

ವಿವಿಧ ಹಿನ್ನೆಲೆಗಳಿಂದ ಬಂದ ಆರೋಗ್ಯ ಸಿಬ್ಬಂದಿಗಳಿಗೆ ಕರುಣಾಶ್ರಯವು ತನ್ನಲ್ಲಿನ ಜ್ಞಾನದ ಸಮಾನ ಹಂಚಿಕೆ ಮಾಡಿದೆ. ಇದೇ ನಿಟ್ಟಿನಲ್ಲಿ ಕರ್ನಾಟಕ ಮತ್ತು ಓರಿಸ್ಸಾ ಸರಕಾರಗಳೊಂದಿಗೆ ಕೈಗೂಡಿಸಿ ನಗರ ಪ್ರದೇಶಗಳಷ್ಟೇ ಅಲ್ಲದೆ ಗ್ರಾಮೀಣ ಭಾಗಗಳಲ್ಲೂ ಉಪಶಮನಕಾರಿ ಚಿಕಿತ್ಸೆ ನೀಡಲು ಅನೇಕ ವೈದ್ಯರನ್ನು ನಿಯೋಜಿಸಿದೆ. ಈ ಜ್ಞಾನದ ಹಂಚಿಕೆಯೊಂದಿಗೆ ನಾವು ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆವ ರಾಷ್ಟ್ರೀಯ ಆರೋಗ್ಯ ಅಭಿಯಾನದ, ರಾಷ್ಟೀಯ ಉಪಶಮನಕಾರಿ ಚಿಕಿತ್ಸಾ ಕಾರ್ಯಕ್ರಮದ (NPPC) ಮುಖ್ಯ ಅಂಗವಾಗಿ ವೈದ್ಯರು ಮತ್ತು ನರ್ಸಗಳಿಗೆ ತರಬೇತಿ ನೀಡುತ್ತಾ ಬಂದಿದ್ದೇವೆ.

ಕರುಣಾಶ್ರಯದಲ್ಲಿ ಸಂಶೋಧನಕಾರರಿಗೆ ಸಹಾಯಕಾರಿಯಾಗಲೂ ಮತ್ತು ವೈಜ್ಞಾನಿಕ ಜಗತ್ತಿನಲ್ಲಿ ನಮ್ಮ ಸಂಸ್ಥೆಯ ಛಾಪು ಮೂಡಿಸಲು, ಅನೇಕ ಸಮಾವೇಶಗಳು, ವಿಚಾರ ಸಂಕಿರಣಗಳು ಮತ್ತು ಶೈಕ್ಷಣಿಕ ಸರಣಿಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ನಿಮ್ಹಾನ್ಸ್, ಮಾಹೆ, ಡಾರ್ವಿನ್ ಅಂತಾರಾಷ್ಟ್ರೀಯ ಸಂಸ್ಥೆಯೊಂದಿಗೆ ಕರುಣಾಆರೈಕೆಯ ಬಗ್ಗೆ ಸಂಶೋಧನೆಗಾಗಿ, ಎಂಫಿಲ್, ಪಿಏಚ್ಡಿ ಪದವಿಗಳಿಗೆ ಮಾರ್ಗದರ್ಶಕರಾಗಿ U.K (DIISC) ಸಂಸ್ಥೆಯೊಂದಿಗೆ ಸಹಯೋಗ ಹೊಂದಿದ್ದೇವೆ.

ಕರುಣಾಶ್ರಯ ಉಚಿತವಾದ ಮೋಬೈಲ್ ಆಪ್ ಒಂದನ್ನು ಬಿಡುಗಡೆ ಮಾಡಿದೆ. “ಪಲ್ಲಿಕೇರ್-ಉಪಶಮನಕಾರಿ ಚಿಕೆತ್ಸಾ ಆಪ್” ವೈದ್ಯಕೀಯ ವೃತ್ತಿಪರರಿಗೆ ಅಂತಿಮ ಘಟ್ಟದ ರೋಗಿಗಳಿಗೆ ಉನ್ನತ ಮಟ್ಟದ ಮತ್ತು ವೃತ್ತಿಪರ ಉಪಶಮನಕಾರಿ ಚಿಕಿತ್ಸೆ ನೀಡುವಲ್ಲಿ ಸಹಾಯಕವಾಗಿದೆ.

ತರಬೇತಿ ಕಾರ್ಯಕ್ರಮಗಳು

1. ಉಪಶಮನಕಾರಿ ಚಿಕಿತ್ಸೆಯ ಮೂಲಭೂತ ಮಾಹಿತಿ

ಈ 10 ದಿನಗಳ ಕಾರ್ಯಕ್ರಮದಲ್ಲಿ, ವೈದ್ಯಕೀಯ ವೃತ್ತಿಪರರು ಮತ್ತು ನರ್ಸ್ ಗಳಿಗೆ ಸಿದ್ಧಾಂತ ಮತ್ತು ಪ್ರಾಯೋಗಿಕ ತರಬೇತಿ ನೀಡುವ ಮುಖಾಂತರ ಅವರಲ್ಲಿ ಉಪಶಮನಕಾರಿ ಚಿಕಿತ್ಸೆಯ ವಿವಿಧ ಆಯಾಮಗಳ ಪರಿಚಯ ಮಾಡಿಸುವುದಾಗಿದೆ, ಉದಾಹರಣೆಗೆ ಮೂಲಭೂತ ಉಪಶಮನಕಾರಿ ಚಿಕಿತ್ಸೆ, ನರ್ಸಿಂಗ್ ವಿಧಾನಗಳು, ಭೌತಚಿಕಿತ್ಸೆಯ ವಿಧಾನಗಳು ಮತ್ತು ಸಂವಹನ ತರಬೇತಿಯನ್ನು ನೀಡಲಾಗುವುದು.

ಈ ತರಹದ ತರಬೇತಿ ಕಾರ್ಯಕ್ರಮಗಳನ್ನು ಕರ್ನಾಟಕ, ಒರಿಸ್ಸಾದ ವೈದ್ಯರು ಹಾಗೂ ನರ್ಸ್ ಗಳು ಮತ್ತು ಸೇನೆಯ ನರ್ಸಿಂಗ್ ಅಧಿಕಾರಿಗಳಿಗೆ ಕರುಣಾಶ್ರಯವು ನೀಡಿದೆ.

2. ನರ್ಸಿಂಗ್ ಸಹಾಯಕ ತರಬೇತಿ

ಈ 6 ತಿಂಗಳ ತರಬೇತಿ ಕಾರ್ಯಕ್ರಮ, ಹದಿಹರೆಯದ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಪ್ರಾರಂಭಿಸಲಾಯಿತು. ಈ ತರಬೇತಿ ಕಾರ್ಯಕ್ರಮವು ಮೂಲ ಶುಶ್ರೂಷಾ ಕೌಶಲ್ಯಗಳು, ರೋಗಿಗಳ ಆರೈಕೆ, ಮೂಲ ಗಣಕಯಂತ್ರ ತರಬೇತಿ ಮತ್ತು ಮೂಲಭೂತ ಇಂಗ್ಲಿಶ್ ತರಬೇತಿಗಳನ್ನು ಒಳಗೊಂಡಿದೆ.

ಇದು ವಸತಿ ಸಹಿತ ಉಚಿತ ಕಾರ್ಯಕ್ರಮವಾಗಿದ್ದು, ಕನಿಷ್ಠ ಮಟ್ಟದ ವಿಧ್ಯಾರ್ಥಿ ವೇತನವನ್ನು ಕೂಡ ನೀಡಲಾಗುವುದು. 18ರಿಂದ 25 ವಯಸ್ಸಿನವರಿಗಾಗಿ ಈ ಕಾರ್ಯಕ್ರಮವನ್ನು ವಿನ್ಯಾಸಿಸಲಾಗಿದೆ.

3. ನಿರಂತರ ವೈದ್ಯಕೀಯ ಶಿಕ್ಷಣ (CME)

ಕರುಣಾಶ್ರಯದಲ್ಲಿ ನಡೆವ ಈ ಕಾರ್ಯಕ್ರಮವು ಅಲ್ಲಿನ ಸಿಬ್ಬಂದಿಗಳ ಕಾರ್ಯದಕ್ಷತೆ ಮತ್ತು ಕೌಶಲ್ಯಗಳನ್ನು ಉತ್ತಮಪಡಿಸುವ ನಿಟ್ಟಿನತ್ತ ನಡೆಯುತ್ತಿದೆ. ವಿಶ್ರಾಂತಿ ಧಾಮದಲ್ಲಿ ರೋಗಿಗಳ ಆರೈಕೆಯಲ್ಲಿ ಯಾವುದೇ ನ್ಯೂನ್ಯತೆ ಕಾಣಬಾರದೆಂಬ ನಮ್ಮ ಉದ್ದೇಶಕ್ಕೆ ಈ ಕಾರ್ಯಕ್ರಮವನ್ನು ನಾವು ನಡೆಸುತ್ತಿದ್ದೇವೆ.

4. ಸಮಾವೇಶಗಳು, ವಿಚಾರ ಸಂಕಿರಣಗಳು ಮತ್ತು ಶೈಕ್ಷಣಿಕ ಸರಣಿಗಳು

ಶಿಕ್ಷಣ ಮತ್ತು ಸಂಶೋಧನಾ ವಿಭಾಗವು ನಿಯತಕಾಲದಲ್ಲಿ ಶೈಕ್ಷಣಿಕ ಸರಣಿಗಳನ್ನು ಆಯೋಜಿಸಿ ಅದರಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ತಜ್ಞರನ್ನು ಉಪಶಮನಕಾರಿ ಚಿಕಿತ್ಸೆಯಬಗ್ಗೆ ಮಾತನಾಡಲು ಕರೆಸುತ್ತಾ ಬಂದಿದ್ದೇವೆ. ತ್ರೈಮಾಸಿಕ ಮತ್ತು ವಾರ್ಷಿಕ ಕಾರ್ಯಕ್ರಮಗಳಾದ ಈ ಸರಣಿಗಳು ಉಪಶಮನಕಾರಿ ಚಿಕಿತ್ಸೆಯ ಆಗು ಹೋಗುಗಳನ್ನು ಪ್ರಕಟಗೊಳಿಸುತ್ತಿದೆ.

ಶಿಕ್ಷಣ ಮತ್ತು ಸಂಶೋಧನಾ ವಿಭಾಗವು ಈ ಕೆಳಕಂಡ ಶೈಕ್ಷಣಿಕ ಸರಣಿಗಳನ್ನು ಆಯೋಜಿಸಿದೆ…

  • ಅಡ್ವಾನ್ಸ್ಡ್ ಥೆರೆಪ್ಯೂಟಿಕ್ಸ್ ಕೋರ್ಸ್ ಇನ್ ಪಾಲೇಟಿವ್ ಮೆಡಿಸಿನ್ ವಿತ್ KMC ಕ್ರೆಡೆಂಶಿಯಲ್ಸ್ – 2017 / 2018
  • ಕಲೋಕ್ವಿಯಂ – ಕಂಪ್ಯಾಶನ್ ಇನ್ ಕೇರ್ – 2018
  • ಸಂವಹನ ಕೌಶಲ್ಯಗಳ ಕಾರ್ಯಾಗಾರ – ಡೀಲಿಂಗ್ ವಿದ್ ಡಿಫಿಕಲ್ಟ ಕ್ವಶ್ಚನ್ಸ್ – 2019

ಕೆಲಸಗಳು ಮತ್ತು ಇಂಟರ್ನ್‌ಶಿಪ್

1. ಪ್ರವೇಶ ಕಾರ್ಯಕ್ರಮಗಳು

ಹೊಸದಾಗಿ ಸೇರಿದ ಆರೊಗ್ಯ ಸಿಬ್ಬಂದಿಗಳಿಗೆ ಉಪಶಮನಕಾರಿ ಚಿಕಿತ್ಸೆಯ ಬಗ್ಗೆ ಸಂಪೂರ್ಣ ಅರಿವು ಮೂಡಿಸಿ ತಮ್ಮ ಜವಾಬ್ದಾರಿಗಳನ್ನು ಹೊರಲು ಸಶಕ್ತರನ್ನಾಗಿ ಮಾಡುವುದು.

2. ಕ್ಲಿನಿಕಲ್ ಕೆಲಸಗಳು

ವಿವಿಧ ಕ್ಲಿನಿಕಲ್ ಹಿನ್ನೆಲೆಯೊಂದಿಗೆ ಬಂದ ವೃತ್ತಿಪರರಿಗೆ ಉಪಶಮನಕಾರಿ ಚಿಕಿತ್ಸೆಯ ಪರಿಚಯ ಮಾಡಿಸಿ ಮತ್ತು ಅದನ್ನು ಉದ್ಯೋಗವನ್ನಾಗಿ ಆಯ್ದು ಕೊಳ್ಳಲು ಬೇಕಾದ ಸಲಹೆಯನ್ನೂ ನೀಡಲಾಗುತ್ತದೆ.

3. ಇಂಟರ್ನ್‌ಶಿಪ್ / ಕೆಲಸದ ನಿಯೋಜನೆಗಳು

ಮಾನವ ಶಾಸ್ತ್ರ ಮತ್ತು ಸಮಾಜ ಶಾಸ್ರದ ವಿಧ್ಯಾರ್ಥಿಗಳು ಕರುಣಾಶ್ರಯದಲ್ಲಿ ಇಂಟರ್ನ್ ಶಿಪ್ ಮಾದಿ ಅವರ ವೈದ್ಯಕೀಯ ಜ್ಞಾನ ಮತ್ತು ಕೌಶಲ್ಯಗಳನ್ನು ಉತ್ತಮಗೊಳಿಸಿ ರೋಗಿಗಳಿಗೆ ಮತ್ತು ಅವರಿಗೆ ಆರೈಕೆ ನೀಡುವವರಿಗೆ ಸಹಾಯವಾಗುವಂತೆ ತಯಾರುಮಾಡುವುದು.

4. ವೀಕ್ಷಣಾ ಭೇಟಿ

ವೈದ್ಯಕೀಯ ಮತ್ತು ಪ್ಯಾರಾ ವೈದ್ಯಕೀಯ ವೃತ್ತಿಪರರಿಗಾಗಿ ಕರುಣಾಶ್ರಯದ ವೀಕ್ಷಣಾ ಭೇಟಿ ಯೋಜಿಸಲಾಗುತ್ತದೆ. ಕರುಣಾಶ್ರಯದ ಸಿಬ್ಬಂದಿಯು ಅವರಿಗೆ ಉಪಶಮನಕಾರಿ ಚಿಕಿತ್ಸೆಯ ಬಗ್ಗೆ ಸಂಪೂರ್ಣ ಅರಿವು ಮೂಡಿಸಿ ವಿಶ್ರಾಂತಿ ಧಾಮದ ಪರಿಚಯ ಮಾಡುವರು.

5. ದೃಷ್ಟಿಕೋನ ಭೇಟಿ (ಶೈಕ್ಷಣಿಕ)

ವೈದ್ಯಕೀಯ, ನರ್ಸಿಂಗ್ ಮತ್ತು ಸಮಾಜ ಶಾಸ್ತ್ರದ ವಿಧ್ಯಾರ್ಥಿಗಳಿಗೆ ಉಪಶಮನಕಾರಿ ಚಿಕಿತ್ಸೆ ಮತ್ತು ಕರುಣಾಶ್ರಯದ ಬಗ್ಗೆ ಅರಿವು ಮೂಡಿಸಲು ನಡೆಸಲಾಗುವ ಕಾರ್ಯಕ್ರಮ.

6. ಸೂಕ್ಷ್ಮೀಕರಣ ಕಾರ್ಯಕ್ರಮಗಳು

ಹತ್ತು ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಬರುವ ವೈದ್ಯಕೀಯ, ನರ್ಸಿಂಗ್ ವೃತ್ತಿಪರರಿಗಾಗಿ ಕರುಣಾಶ್ರಯದಲ್ಲಿ ಒಂದು ದಿನದ ಸೂಕ್ಷ್ಮೀಕರಣ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇದರಿಂದ ಉಪಶಮನಕಾರಿ ಚಿಕಿತ್ಸೆ ಮತ್ತು ಅದರ ಪ್ರಾಯೋಗಿಕ ಉಪಲಭ್ಧಿಗಳ ಪರಿಚಯವನ್ನು ಮಾಡಿಸಲಾಗುತ್ತದೆ.

Educational efforts in palliative and end-of-life care

ಹೇಗೆ ಸಹಾಯ ಮಾಡುತ್ತದೆ

ಭಾರತದಲ್ಲಿ ಉಪಶಾಮಕ ಆರೈಕೆ ಇನ್ನೂ ಅಭಿವೃದ್ಧಿಯ ಆರಂಭಿಕ ಹಂತದಲ್ಲಿದೆ ಮತ್ತು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಉಪಶಾಮಕ ಆರೈಕೆಯ ಅನ್ವಯವನ್ನು ಸುಧಾರಿಸುವ ವಿಧಾನವು ಶಿಕ್ಷಣ, ತರಬೇತಿ ಮತ್ತು ಸಂಶೋಧನಾ ಪ್ರಯತ್ನಗಳನ್ನು ಒಳಗೊಂಡಿದೆ. ಉಪಶಾಮಕ ಮತ್ತು ಜೀವನದ ಅಂತ್ಯದ ಆರೈಕೆಯಲ್ಲಿನ ಶೈಕ್ಷಣಿಕ ಪ್ರಯತ್ನಗಳು ದಾದಿಯರು, ವೈದ್ಯರು ಮತ್ತು ಕ್ಲಿನಿಕಲ್ ಆರೈಕೆಗೆ ಸಂಬಂಧಿಸಿದ ಇತರ ವಿಭಾಗಗಳಿಗೆ ಪ್ರಯೋಜನವನ್ನು ನೀಡಿವೆ.

Educational efforts in palliative and end-of-life care

ಕರುಣಾಶ್ರಯದ ಶಿಕ್ಷಣ ಮತ್ತು ಸಂಶೋಧನಾ ತಂಡ

  • Dr. ನಾಗೇಶ್ ಸಿಮ್ಹಾ ವೈದ್ಯಕೀಯ ನಿರ್ದೇಶಕರು, ಕರುಣಾಶ್ರಯ
  • Dr. ಜೆರೆಮಿ ಜಾನ್ಸನ್ ಮುಖ್ಯ ಮಾರ್ಗದರ್ಶಿ, ಕರುಣಾಶ್ರಯದ ಶಿಕ್ಷಣ ಮತ್ತು ಸಂಶೋಧನೆ
  • Ms. ಸಂಗೀತ N ನರ್ಸಿಂಗ್ ಶಿಕ್ಷಕರು
  • Ms. ಮರಿಯಾ ಸೋನಿಯಾ ಲೂಯಿಸ್ ಸಂಶೋಧನಾ ಸಹಾಯಕಿ