CSR ಮತ್ತು ಸ್ವಯಂಸೇವಕರು
ಭಾರತ ಸರಕಾರದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (CSR) ಮಾರ್ಗಸೂಚಿಗಳ ಪ್ರಕಾರ, ಸರಕಾರವು ಕೆಲವು ಕ್ಷೇತ್ರಗಳಲ್ಲಿ ಸ್ವಯಂ ಸಂಘ ಸಂಸ್ಥೆಗಳು ತಮ್ಮ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮಗಳನ್ನು ನಡೆಸಬಹುದೆಂಬ ಕಾಯಿದೆ ಹೊರಡಿಸಿದೆ. ಕಾಯಿದೆಯಲ್ಲಿ ನಿರ್ದೇಶಿಸಲ್ಪಟ್ಟ ಹನ್ನೊಂದು ಅಂಶಗಳಲ್ಲಿ, ಕರುಣಾಶ್ರಯಕ್ಕೆ ಪ್ರಸ್ತುತವಾದ ಮತ್ತು ಉಪಶಮನಕಾರಿ ಚಿಕಿತ್ಸೆಗೆ ಸಂಬಂಧಪಟ್ಟ ಅಂಶಗಳು ಕೆಳಕಂಡಂತಿವೆ..
ಹಸಿವು, ಬಡತನ ಮತ್ತು ಅಪೌಷ್ಠಿಕತೆಯನ್ನು ನಿರ್ಮೂಲನೆ ಮಾಡುವುದು, ಆರೋಗ್ಯ ರಕ್ಷಣೆಗೆ ಉತ್ತೇಜನ ನೀಡುವುದು, ಜೊತೆಗೆ ರೋಗ ನಿಯಂತ್ರಣ ಚಿಕಿತ್ಸೆ ಮತ್ತು ನಿರ್ಮಲೀಕರಣ, ಮತ್ತು ಕೇಂದ್ರ ಸರಕಾರ ಸ್ಥಾಪಿಸಿರುವ ಸ್ವಚ್ಚ ಭಾರತ ಕೋಶಕ್ಕೆ ನೀಡಬಹುದಾದ ದೇಣಿಗೆಯ ಮುಖಾಂತರ ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ ಸುಧಾರಣೆಯ ಪ್ರಯತ್ನದಲ್ಲಿ ಭಾಗಿಗಳಾಗುವುದು.
CSR ಕಾನೂನು
ಸಿಎಸ್ಆರ್ ಚಟುವಟಿಕೆಗಳ ಭಾಗವಾಗಿ, ಕಾರ್ಪೊರೇಟ್ ತಂಡಗಳು ಕರುಣಾಶ್ರಯದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಬಹುದು. ಸ್ವಯಂಸೇವಕರು ಉತ್ತಮ ಕೆಲಸಕ್ಕಾಗಿ ತಮ್ಮ ಸಮಯವನ್ನು ನೀಡುತ್ತಿದ್ದಾರೆ. ಸ್ವಯಂಸೇವಕರ ಮನೋಭಾವವು ಇತರ ಜನರ ಜೀವನದಲ್ಲಿ ನಿಜವಾದ ವ್ಯತ್ಯಾಸವನ್ನು ಉಂಟುಮಾಡುವುದರಿಂದ ಪಡೆದ ನಿಮ್ಮ ಆನಂದವನ್ನು ಹೆಚ್ಚಿಸುತ್ತದೆ.
ಕರುಣಾಶ್ರಯವನ್ನು ಪೋಷಿಸುವ ವಿವಿಧ ಸಂಘಗಳು ಸೇರಿದಂತೆ ಸ್ವಯಂಸೇವಕ ಗುಂಪುಗಳು ವಿಶೇಷ ಗುರುತನ್ನು ಗಳಿಸುತ್ತಾರೆ ಮತ್ತು ನಮ್ಮ ಉದ್ದೇಶವನ್ನು ಬೆಂಬಲಿಸುವುದರ ಜೊತೆಗೆ ನಮ್ಮೊಂದಿಗೆ ತೊಡಗಿಸಿಕೊಳ್ಳಲು ಅಂಗೀಕಾರಕ್ಕೆ ಅರ್ಹರಾಗಿದ್ದಾರೆ. ತಮ್ಮ ನಿಯಮಿತ ದೈನಂದಿನ ವೇಳಾಪಟ್ಟಿಯಿಂದ ಸಮಯ ತೆಗೆದುಕೊಂಡು, ಅವರು ತಮ್ಮ ಕೆಲಸವನ್ನು ಬಿಟ್ಟು ಕರುಣಾಶ್ರಯಕ್ಕೆ ಭೇಟಿ ನೀಡುತ್ತಾರೆ ಮತ್ತು ತಮ್ಮದೇ ಆದ ರೀತಿಯಲ್ಲಿ, ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ದೈನಂದಿನ ಕಾರ್ಯಚಟುವಟಿಕೆಗೆ ಸಹಾಯ ಮಾಡುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ನಮ್ಮೊಂದಿಗೆ ತೊಡಗಿಸಿಕೊಂಡ ಪ್ರತಿಯೊಬ್ಬ ಸ್ವಯಂಸೇವಕರಿಗೆ ಕರುಣಾಶ್ರಯವು ನಿಜವಾಗಿಯೂ ಚಿರಋಣಿಯಾಗಿದೆ.ಸ್ವಯಂಸೇವಕ ಗುಂಪುಗಳ ಹೆಸರುಗಳು ಎಸ್‌ಆರ್‌ಆರ್, ಶೇರ್ ಎ ಸ್ಮೈಲ್, ಸನ್ಮನ್, ಮತ್ತು ಯೂತ್ ಫಾರ್ ಸೇವಾ ಅವರು ಅನಿಯಮಿತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
- ವ್ಯೆಯಕ್ತಿಕ ಸ್ವಯಂಸೇವೆ
- ಕಾರ್ಪೊರೇಟ್ ಸ್ವಯಂಸೇವಕ
- ಸ್ವಯಂಸೇವಾ ಕಾರ್ಯಕ್ರಮಗಳು
- ಪರಿಶ್ರಮದ ಮೌಲ್ಯಮಾಪನ
- ಸ್ವಯಂಸೇವಾ ಕಾರ್ಯಕ್ರಮಗಳು
ಕರುಣಾಶ್ರಯದ ಎಲ್ಲಾ ವಿಭಾಗಗಳಲ್ಲೂ ಸ್ವಯಂಸೇವಕರ ಅವಶ್ಯಕತೆ ಅತ್ಯಗತ್ಯವಾಗಿದೆ. ಪ್ರಸ್ತುತ 25 ಜನ ಸ್ವಯಂಸೇವಕರು ನಿಯಮಿತವಾಗಿ ಬರುತ್ತಿದ್ದಾರೆ. ಸಂಸ್ಥೆಯಲ್ಲಿ ಕೆಲಸ ಮಾಡಿದ ಎಲ್ಲಾ ಸ್ವಯಂಸೇವಕರಿಗೂ ಸಂಸ್ಥೆಯು ಚಿರಋಣಿಯಾಗಿದೆ, ಅವರ ಸಹಾಯದಿಂದಾಗಿ ಕೊನೇ ಹಂತದ ಕ್ಯಾನ್ಸರ್ ರೋಗಿ ಗಳಿಗೆ ಪ್ರೀತಿಪೂರ್ವಕ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗಿದೆ. ನೀವು ಯಾವುದೇ ಹಿನ್ನೆಲೆಯಿಂದ ಬಂದಿರಬಹುದು, ನಿಮ್ಮ ವಯಸ್ಸು ಎಷ್ಟೇ ಆಗಿರಬಹುದು, ನೀವು ಸ್ವಯಂಸೇವಕರಾಗುವುದು ಕರುಣಾಶ್ರಯದ ಹಂಬಲ, ಸಾರ್ವಜನಿಕರ ಸಹಕಾರವೇ ಸಂಸ್ಥೆಗೆ ಬೆಟ್ಟದಂತಹ ಬಲ.
ಕನಿಷ್ಠ ಅರ್ಧ ದಿನದಿಂದ ಪೂರ್ಣ ದಿನ
- ಬೆಳಿಗ್ಗೆ 9.30ರಿಸೆಪ್ಶನ್ ನಲ್ಲಿ ಎಲ್ಲರ ಆಗಮನ
- ಬೆಳಿಗ್ಗೆ 9.45ಕರುಣಾಶ್ರಯದ ಬಗ್ಗೆ ವಿವರ ನೀಡುವಿಕೆ
- ಬೆಳಿಗ್ಗೆ 10.15 ಸ್ಥಳ ಪರಿಚಯ
- ಬೆಳಿಗ್ಗೆ 10.30ಸಾಂಸ್ಕೃತಿಕ ಕಾರ್ಯಕ್ರಮಗಳು / ಆಟಗಳು / ಸ್ವಯಂಸೇವಾ ಕೆಲಸಗಳು
- ಅಪರಾಹ್ನ 12.00ರಿಸೆಪ್ಶನ್ ನಲ್ಲಿ ಭೇಟಿ ಮತ್ತು ಕೆಲಸ ಹಂಚಿಕೆ
- ಮಧ್ಯಾನ್ಹ 12.05ಸ್ವಯಂಸೇವಾ ಕೆಲಸಗಳು
- ಮಧ್ಯಾನ್ಹ 1.30ಊಟ
- ಮಧ್ಯಾನ್ಹ 2.30 ಸ್ವಯಂಸೇವೆಗೆ ವಹಿಸಿದ ಕೆಲಸಗಳು (ಮೇಲೆ ತಿಳಿಸಿದ ಕೆಲಸ)
- ಮಧ್ಯಾನ್ಹ 4.00ರಿಸೆಪ್ಶನ್ ನಲ್ಲಿ ಭೇಟಿ ಮತ್ತು ಕಾರ್ಯಕ್ರಮ ಕೊನೆಗೊಳ್ಳುವುದು
ಕೋರಿಕೆಯ ಮೇರೆಗೆ ಈ ಕೆಳಕಂಡ ದಾಖಲೆಗಳನ್ನು ನೋಡಲು ಅವಕಾಶವಿದೆ:
- ಟ್ರಸ್ಟ್ ಡೀಡ್
- ಪ್ಯಾನ್ ಕಾರ್ಡ್
- FCRA
- 12A
- 80G
- ಆದಾಯ ತೆರಿಗೆ ಪಾವತಿ ದಾಖಲೆ
- ವಾರ್ಷಿಕ ವರದಿಗಳು
- ಕರುಣಾಶ್ರಯದ ಟ್ರಸ್ಟೀ ವಿವರಗಳು
- ಕರಪತ್ರಗಳು
- ವಿಳಾಸದ ಪುರಾವೆ
- ಲೆಕ್ಕಪತ್ರ ಮತ್ತು ಹಣಕಾಸು ಸಂಬಧಿತ ಪ್ರತ್ಯೇಕ ಕೈಪಿಡಿಗಳು
- ಮಾನವ ಸಂಪನ್ಮೂಲ ನೀತಿ ಸಂಹಿತೆ
- ಖರೀದಿ ನೀತಿ ಸಂಹಿತೆ
- ಚಿರಾಸ್ಥಿ ನೀತಿ ಸಂಹಿತೆ
- ಪ್ರಯಾಣ ನೀತಿ ಸಂಹಿತೆ
ಸ್ವಯಂಸೇವಾ ಕಾರ್ಯಕ್ರಮಗಳು :
- ಆವರಣ ಸ್ವಚ್ಛಗೊಳಿಸುವಿಕೆ
- ತಾರಸಿ / ಸೌರ ಫಲಕ ಶುಚಿಗೊಳಿಸುವಿಕೆ
- ಅಡುಗೆ ಮನೆಯಲ್ಲಿ ಸಹಾಯ ಮಾಡುವುದು
- ಹತ್ತಿ ಉಂಡೆ ಮಾಡುವುದು
- ವೈದ್ಯಕೀಯ ಕಿಟ್ ಮಾಡುವುದು
- ಚಾರಿಟಿ ಅಂಗಡಿ
- ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಟಗಳು
ದಯವಿಟ್ಟು ನಮ್ಮ ಮಾಸಿಕ ಸ್ವಯಂಸೇವಕ ಅವಶ್ಯಕತೆಗಳನ್ನು ಪರಿಶೀಲಿಸಿ. ಮೇಲೆ ವಿವರಿಸಿದ ಪ್ರದೇಶಗಳನ್ನು ಮೀರಿ ನೀವು ನಮಗೆ ಬೆಂಬಲ ನೀಡಬಹುದು. ನಮ್ಮ ರೋಗಿಗಳಿಗೆ ಹೆಚ್ಚು ಪ್ರಯೋಜನವಾಗುವ ರೀತಿಯಲ್ಲಿ ಇತರ ನವೀನ ಬೆಂಬಲಗಳನ್ನು ಚರ್ಚಿಸಲು ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಕರುಣಾಶ್ರಯದ ಸೇವೆಗಳಲ್ಲಿ ನೀವು ಹೇಗೆ ಸಹಾಯ ಮಾಡಬಹುದು
CSR ದೇಣಿಗೆ ಆಯ್ಕೆಗಳು
ಡಿಜಿಟಲ್ ಬೆಂಬಲ
ಜಾಹಿರಾತು ಮತ್ತು ಪ್ರಚಾರ ಸಹಾಯ
- ಸಂಬಳದ ಪ್ರತಿಯಾಗಿ ಸೇವಾ ಸಹಾಯ
- ಹೊಂದಿಕೆಯಾಗುವ ಸಹಾಯ
- CSR ಮತ್ತು ಸಂಬಂಧಿತ ಕಾರ್ಯಕ್ರಮಗಳು
- ವಿವಿಧೋದ್ದೇಶಿತ ಮಳಿಗೆಗಳು ಮತ್ತು ಕಾರ್ಯಕ್ರಮಗಳು
- ನಿಧಿ ಸಂಗ್ರಹಣಾ ಕಾರ್ಯಕ್ರಮಗಳು
ಹೆಸರೇ ಸೂಚಿಸಿದಂತೆ, ದಾನ ಮಾಡಲು ಮುಂಬರುವರಿಗೆ, ಅವರು ಸಂಬಳ ಪಡೆಯುವ ಕೆಲಸಮಾಡುತ್ತಿದ್ದಲ್ಲಿ, ನೀಡಿದ ದೇಣಿಗೆಗೆ ಆದಾಯ ತೆರಿಗೆ ರಿಯಾಯಿತಿ ಪಡೆಯುವ ಯೋಜನೆ. ದೇಣಿಗೆಯಿಂದ ಸಿಗುವ ಆದಯ ತೆರಿಗೆ ರಿಯಾಯತಿ ನೇರವಾಗಿ ಸಂಬಳದ ಲೆಖ್ಖದಲ್ಲಿ ಸೇರ್ಪಡೆಯಾಗುತ್ತದೆ. ಇದರಿಂದ ತಮಗೆ ಇಷ್ಟವಾದ ಚಾರಿಟಿಗೆ ದೇಣಿಗೆ ನೀಡುವುದಲ್ಲದೇ, ತಾವು ಕೆಲಸಮಾಡುತ್ತಿರುವ ಸಂಸ್ಥೆಗೆ ಇರುವ ಸಾಮಾಜಿಕ ಜವಾಬ್ದಾರಿಯ ಅರಿವಾಗುತ್ತದೆ.
ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಕರುಣಾಶ್ರಯದಂತಹ ಸೇವಾ ಮನೋಭಾವ ಇರುವ ಲಾಭ ರಹಿತ ಸಂಘಟನೆಗಳಿಗೆ ಆರ್ಥಿಕ ಸಹಾಯನೀಡುತ್ತಾ ಬಂದಿವೆ. ಅಂದರೆ ಸಿಬ್ಬಂದಿಯ ಸಂಬಳದಿಂದ ಅವರು ನೇರವಾಗಿ ಲಾಭ ರಹಿತ ಸಂಘಟನೆಗಳಿಗೆ ದೇಣಿಗೆಯನ್ನು ನೀಡಿದಲ್ಲಿ ಅವರು ಕೆಲಸ ಮಾಡುತ್ತಿರುವ ಸಂಸ್ಥೆಯೂ ಕೂಡ ನಿಗದಿತ ಅನುಪಾತದಂತೆ (ಸಾಧಾರಣವಾಗಿ 1:1) ದೇಣಿಗೆ ನೀಡುತ್ತದೆ. ಇದರಿಂದ ಲಾಭದ ಅಪೇಕ್ಷೆಯಿಲ್ಲದೆ ನಿಸ್ವಾರ್ಥವಾಗಿ ಕಾರ್ಯತತ್ಪರವಾಗಿರುವ ಸಂಘ ಸಂಸ್ಥೆಗಳಿಗೆ ಸಮಾಜಕ್ಕೆ ಮತ್ತಷ್ಟು ಸೇವೆಯನ್ನು ಮಾಡಲು ಉತ್ತೇಜನ ದೊರೆತು ತಮ್ಮ ಸೇವೆಯನ್ನು ಮುಂದುವರಿಸಲು ಬೇಕಾದಂತಹ ಹಣ ಸಹಾಯ ಮಾಡಿದಂತಾಗುತ್ತದೆ.
ಯಾವುದೇ ಸಂಘ ಸಂಸ್ಥೆ, ಸಮಾಜ ಮುಖೀ ಕೆಲಸ ಹಾಗು ಜವಾಬ್ದಾರಿಯನ್ನು ನಿರ್ವಹಿಸಲು CSR ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತದೆ. ಇದರಂತೆ ಕರುಣಾಶ್ರಯದಲ್ಲಿ ನಡೆಯುತ್ತಿರುವ ಸೇವಾ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯ ಮಾಡಲು ಸಾಧ್ಯವಾಗುವ ನಿಧಿ ಸಂಗ್ರಹಣಾ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಇಂತಹ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳ ಒಳಗಡೆಯೇ ನಡೆಸಬಹುದು ಅಥವಾ ಸಾರ್ವಜನಿಕ ಸ್ಥಳಗಳಲ್ಲೂ ನಡೆಸಬಹುದು.
ಸಾಮಾಜಿಕ ಕಳಕಳಿಯನ್ನು ಜಾಹಿರುಗೊಳಿಸುವುದಕ್ಕೆ ಪ್ರಚಾರ ಕಾರ್ಯಕ್ರಮಗಳು ಮುಖ್ಯವಾಗುತ್ತವೆ. ಸಂಘ ಸಂಸ್ಥೆಗಳು ಕರುಣಾಶ್ರಯಕ್ಕೆ ಬೆಂಬಲ ಸೂಚಿಸುತ್ತಾ ತಮ್ಮ ಮಳಿಗೆಗಳನ್ನು ಅವರ CSR ಕಾರ್ಯಕ್ರಮಗಳಲ್ಲಿ ತೆರೆಯಲು ಅನುವುಮಾಡಿಕೊಡುತ್ತಾರೆ. ಈ ಮಳಿಗೆಗಳಿಂದ ಕರುಣಾಶ್ರಯವು ತನ್ನ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುತ್ತಾ ಸಂಸ್ಥೆ ಮಾಡುತ್ತಿರುವ ಕೆಲಸದ ಬಗ್ಗೆ ಜನರಲ್ಲಿ ಅರಿವು ಮೂಡಿಸಬಹುದು. ಅಷ್ಟೇ ಅಲ್ಲದೆ ಈ ಮಳಿಗೆಗಳಲ್ಲಿ ಕರುಣಾಶ್ರಯದಲ್ಲಿ ತಯಾರಿಸಲ್ಪಟ್ಟ /ಸಂಗ್ರಹಿಸಲ್ಪಟ್ಟ ಸಾಮಾನು ಸಾಮಗ್ರಿಗಳನ್ನು ಮಾರಾಟ ಮಾಡಬಹುದಾಗಿದೆ.
- ಅಂತರ್ಜಾಲದಲ್ಲಿನ ಜನರ ಗುಂಪು (ಕ್ರೌಡ್‌ಫಂಡಿಂಗ್) ಗಳಿಂದ ಹಣ ಸಂಗ್ರಹ ಮಾಡುವುದು (ಉದಾಹರಣೆಗೆ ಮಿಲಾಪ್, ಗ್ಲೋಬಲ್ ಗಿವಿಂಗ್ ಇತ್ಯಾದಿ.)
- TCS 10 K ಮ್ಯಾರಥಾನ್ ಓಟ
- ಕಲರಥಾನ್
- ದಾನೋತ್ಸವ
- ಮನೆ ಮನೆಗೆ ಹೋಗಿ ಚಂದಾ ಸ್ವೀಕರಿಸುವ ಕಾರ್ಯಕ್ರಮಗಳು