ಕರುಣಾಶ್ರಯ
ಮಾರಕ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ, ಅವರ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ವಿಶ್ವಾಸವರ್ಧಕ ಉಪಶಮನಕಾರಿ ಚಿಕಿತ್ಸೆ ಹಾಗು ಅವರ ಬಗ್ಗೆ ಕಾಳಜಿ ವಹಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ, ಗುಣಪಡಿಸಲಾಗದ ಹಂತವನ್ನು ತಲುಪಿ ಬದುಕಿನ ಅಂತಿಮ ಕ್ಷಣಗಳನ್ನು ಎಣಿಸುತ್ತಿರುವ ಕ್ಯಾನ್ಸರ್ ರೋಗಿಗಳಿಗೆ ಉಪಶಾಮಕ ಆರೈಕೆ ಹಾಗೂ ಶಾಂತಿಯುತ ವಿದಾಯಕ್ಕೆ ಬೇಕಾದ ವಾತಾವರಣವನ್ನು ಸೃಷ್ಟಿಸುವುದು ಇಂದಿನ ಅಗತ್ಯವಾಗಿದೆ. ಇಂತಹ ಅನುಪಮ ಸೇವೆಯನ್ನು ಸಲ್ಲಿಸುವ ಗುರಿಯಿಂದ ಆರಂಭಗೊಂಡ ಸಂಸ್ಥೆ ಕರುಣಾಶ್ರಯ. ಬೆಂಗಳೂರು ಹಾಸ್ಪೈಸ್ ಟ್ರಸ್ಟ್ – ಕರುಣಾಶ್ರಯ – ಭಾರತೀಯ ಕ್ಯಾನ್ಸರ್ ಸೊಸೈಟಿಯ (ಕರ್ನಾಟಕ ಅಧ್ಯಾಯ)ದ ಜಂಟಿ ಯೋಜನೆಯಾಗಿದೆ. ಬೆಂಗಳೂರಿನ ಇಂದಿರಾನಗರದ ರೋಟರಿ ಕ್ಲಬ್ ಈ ಮಹತ್ಕಾರ್ಯವನ್ನು ಕೈಗೆತ್ತಿಕ್ಕೊಂಡು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದೆ.
ನಮ್ಮ ದೃಷ್ಟಿ
ಕರುಣಾಶ್ರಯ ಸಾಮಾಜಿಕ ಕಳಕಳಿ – ಸೇವಾಮನೋಭಾವ – ಮಾನವೀಯತೆಗಳ ತ್ರಿವೇಣಿ ಸಂಗಮದ ಒಂದು ಸೇವಾ ಸಂಸ್ಥೆ. ಜೀವಕ್ಕೆ ಗಂಭೀರ ತೊಂದರೆಯನ್ನುಂಟುಮಾಡುವ ಕ್ಯಾನ್ಸರಿನಂತಹ ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ, ರೋಗನಿರ್ಣಯವಾದ ಸಮಯದಿಂದ ಅದರ ನಿವಾರಣೆಗೆ ಉಪಶಮನಕಾರಿ ಚಿಕಿತ್ಸೆ ನೀಡುವುದು, ಅವರ ದೈಹಿಕ ನೋವಿಗೆ ಉಪಶಮನ ನೀಡುವುದಲ್ಲದೇ ಮಾನಸಿಕ ಯಾತನೆಗಳಿಂದ ಅವರನ್ನು ಮುಕ್ತಿಗೊಳಿಸಿ, ಅವರ ಜೀವನದ ಕೊನೆಯ ದಿನಗಳನ್ನು ಸಹನೀಯ ಗೊಳಿಸುವುದು. ರೋಗಿಯ ಕುಟುಂಬ ಮತ್ತು ರೋಗಿಗೆ ಆರೈಕೆ ನೀಡುವವರ ನಡುವಿನ ಮಾನಸಿಕ ಮತ್ತು ಭಾವನಾತ್ಮಕ ಸಂಬಂಧದ ಬೆಸುಗೆಯನ್ನು ಗಾಢಗೊಳಿಸುವುದು ಕರುಣಾಶ್ರಯದ ಮೂಲ ಉದ್ದೇಶಗಳು.
ನಮ್ಮ ಮಿಷನ್
ಜೀವನದ ಅಂತಿಮ ಘಟ್ಟದಲ್ಲಿರುವ ರೋಗಿಗಳಿಗೆ ಉಪಶಮನಕಾರಿ ಚಿಕಿತ್ಸೆಯ ಜೊತೆಗೆ ನೋವು ನಿವಾರಣೆ ಮತ್ತು ನಿರ್ವಹಣೆ ಕರುಣಾಶ್ರಯದ ಧ್ಯೇಯ. ಬಹುತೇಕ ರೋಗಿಗಳಿಗೆ ಅವರ ವ್ಯಾಧಿಯ ದೈಹಿಕಯಾತನೆಗಿಂತಲೂ ಮಾನಸಿಕ ಹಾಗೂ ಮನೋವ್ಯೆಜ್ಞಾನಿಕ ಕಾರಣಗಳಿಂದಾದ ಯಾತನೆಗಳು ಮಿಗಿಲಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಅವುಗಳ ಆರೈಕೆಯೇ ಮುಖ್ಯ ಗುರಿಯಾಗುತ್ತದೆ. ಬದುಕಿಗೆ ಅಂತಿಮವಿದಾಯ ನುಡಿಯುವ ಘಟ್ಟದಲ್ಲಿರುವ ರೋಗಿಗಳಿಗೆ, ಘನತೆ, ಗೌರವ, ಶಾಂತಿ ಮತ್ತು ನಿರಾತಂಕ ಜೀವನ ಶೈಲಿಯನ್ನು ಒದಗಿಸುವುದು. ರೋಗಿಗಳ ನೋವು ಮತ್ತು ರೋಗ ಲಕ್ಷಣಗಳಿಗನುಗುಣವಾಗಿ ಸೂಕ್ತ ಉಪಶಮನಕಾರಿ ಚಿಕಿತ್ಸೆಯ ಜೊತೆ ರೋಗಿಯ ಕುಟುಂಬದ ಭಾವನಾತ್ಮಕ ಅಗತ್ಯಗಳನ್ನು ಕೂಡ ಬೆಂಬಲಿಸಿ ಸಾರ್ಥಕಗೊಳಿಸುವುದು ಕರುಣಾಶ್ರಯದ ಪ್ರಮುಖ ಗುರಿಯಾಗಿದೆ. ಇಂತಹ ಸಮಾಜಮುಖೀ ಸೆೇವೆಗಾಗಿ ಹಲವಾರು ಸಮರ್ಥ ವೈದ್ಯರು, ಬದ್ಧತೆಯಿಂದ ದುಡಿಯುವ ದಾದಿಯರು, ಸಮಾಜ ಸೇವಕರು, ಕೊಡುಗೈ ದಾನಿಗಳು ಕರುಣಾಶ್ರಯದ ಬೆನ್ನೆಲುಬಾಗಿ ನಿಂತಿದ್ದಾರೆ. ಸಮಾಜದ ಕಲುಷಿತ ವಾತಾವರಣವನ್ನು ತಿಳಿಗೊಳಿಸಲು ಮಾದರಿಯಾಗಿ ಶ್ರಮಿಸುತ್ತಿದ್ದಾರೆ.
ಕರುಣಾಶ್ರಯ ಸೇವೆಗಳ ಆಗರ
ಒಳ ರೋಗಿ ಸೌಲಭ್ಯಗಳು / ಹೊರ ರೋಗಿ ವಿಭಾಗ/ ಹೊರ ರೋಗಿಗಳು
ಕರುಣಾಶ್ರಯದಲ್ಲಿ ಈಗಾಗಲೇ 73 ಒಳ ರೋಗಿಗಳಿಗೆ ದಿನವಿಡೀ ಉಪಶಮನಕಾರಿ ಚಿಕಿತ್ಸೆ ಸೇವೆಯನ್ನು ನೀಡಲಾಗುತ್ತಿದೆ. 1999ರಿಂದ ಇಲ್ಲಿಯ ವರೆಗೂ ಒಳ ರೋಗಿ ವಿಭಾಗಕ್ಕೆ ಸೇರಿದ ರೋಗಿಗಳ ಸಂಖ್ಯೆ 18,500ನ್ನು ಮೀರಿದೆ. ಒಳ ರೋಗಿಗಳ ವಿಭಾಗವು ಸುಸ್ಸಜ್ಜಿತ ಮೂಲ ಸೌಕರ್ಯಗಳೊಂದಿಗೆ ಗಂಡಸರು ಮತ್ತು ಹೆಂಗಸರ ಪ್ರತ್ಯೇಕ ವಾರ್ಡ್ ಗಳು, ಅಗತ್ಯವಾದ … ಉಪಕರಣಗಳು, ಔಷಧಾಲಯ, ಅಡುಗೆ ಮನೆ, ಲಾಂಡ್ರಿ ಸೇವೆ, ಪ್ರಾರ್ಥನೆ ಮತ್ತು ಧ್ಯಾನ ಮಾಡುವ ಕೊಠಡಿಗಳು, ವಿಚಾರ ಸಂಕಿರಣ ಕೊಠಡಿಗಳು, ನರ್ಸ್ ಗಳ ವಸತಿ ನಿಲಯ ಮತ್ತು ಆಡಳಿತ ಕಛೇರಿಗಳನ್ನು ಒಳಗೊಂಡಿದೆ.
ಮನೆಯಲ್ಲಿಯೇ ಆರೈಕೆ
1995ರಲ್ಲೇ ಕರುಣಾಶ್ರಯವು ರೋಗಿಗಳ ಮನೆಯಲ್ಲಿಯೇ ಆರೈಕೆ ಪ್ರಾರಂಭಿಸಿತು, ಇಂದಿಗೂ ಅನೇಕ ರೋಗಿಗಳ ಮತ್ತು ರೋಗಿಗಳ ಮನೆಯವರ ಆಯ್ಕೆ ಇದೇ ಆಗಿದೆ. ರೋಗಿಗಳ ಮನೆಯಲ್ಲೇ ಉಪಶಮನಕಾರಿ ಚಿಕಿತ್ಸಾ ಸೇವೆಯನ್ನು ಒದಗಿಸಲು ಒತ್ತಾಸೆ ನೀಡುವ ಸಹಾಯಕರು, ಸಲಹೆಗಾರರು, ಆರೋಗ್ಯ ಸಹಾಯಕರು ಮತ್ತು ತರಬೇತಿ ಹೊಂದಿದ ಸ್ವಯಂಸೇವಕರನ್ನೊಳಗೊಂಡ ಉಪಶಮನಕಾರಿ ಚಿಕಿತ್ಸೆ ವೃತ್ತಿಪರರ ತಂಡ ತಯಾರಿರುತ್ತದೆ. ಈ ತಂಡವು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಉಪಶಮನಕಾರಿ ಚಿಕಿತ್ಸೆ ಸೇವೆಯನ್ನು ರೋಗಿಗಳಿಗೆ ನೀಡುವುದರಲ್ಲಿ ಯಶಸ್ವು ಕಂಡಿದೆ. ರೋಗಿಗಳಿಗೆ ಬೇಕಾದಲ್ಲಿ ವೈದ್ಯರೂ ಕೂಡ ಈ ತಂಡದ ಜೊತೆಯಲ್ಲಿ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಾರೆ.… ಇಂದಿನವರೆಗೆ ಮನೆಯಲ್ಲಿ ಆರೈಕೆ ತೆಗೆದು ಕೊಂಡ ರೋಗಿಗಳ ಸಂಖ್ಯೆ 4500ಕ್ಕೂ ಅಧಿಕವಾಗಿದೆ. ಯಾವುದೇ ಸಮಯದಲ್ಲಿ ಸರಾಸರಿ 50 ಮಂದಿ ರೋಗಿಗಳು ಉಪಶಮನಕಾರಿ ಚಿಕಿತ್ಸೆ ಸೇವೆಯನ್ನು ಕರುಣಾಶ್ರಯದ ಮುಖಾಂತರ ಪಡೆದುಕೊಳ್ಳುತ್ತಿರುತ್ತಾರೆ.
ನರ್ಸಿಂಗ್ ಸಹಾಯಕರ ತರಬೇತಿ
ಮಹಿಳಾ ಸಬಲೀಕರಣದಲ್ಲಿ ಕರುಣಾಶ್ರಯ ಅಪಾರ ನಂಬಿಕೆ ಇಟ್ಟಿದೆ. ಆರ್ಥಿಕ ಸಾಮರ್ಥ್ಯ ಇಲ್ಲದ ಕಾರಣ ಉನ್ನತ ಶಿಕ್ಷಣವನ್ನು ಬದಿಗೊತ್ತಿರುವ 18 ರಿಂದ-22 ವಯಸ್ಸಿನ ಬಡ ಹೆಣ್ಣು ಮಕ್ಕಳಿಗೆ ವಿಶೇಷ ನರ್ಸಿಂಗ್ ಸಹಾಯಕರ ತರಬೇತಿ ನೀಡಲಾಗುತ್ತದೆ. ಈ ತರಬೇತಿಯ ನಂತರ ಶಿಕ್ಷಾರ್ಥಿಗಳು ಕೆಲಸಕ್ಕೆ ಅರ್ಹತೆ ಹೊಂದುವುದಲ್ಲದೇ, ಕೊನೆಯ ಘಟ್ಟದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವಷ್ಟು ಪರಿಣಿತಿ ಹೊಂದುತ್ತಾರೆ. …
ಆರು ತಿಂಗಳ ಈ ತರಬೇತಿ ಸಂಪೂರ್ಣ ಉಚಿತವಾಗಿದ್ದು, ಪ್ರತಿ ತಿಂಗಳು ಎಲ್ಲಾ ಶಿಕ್ಷಾರ್ಥಿಗಳಿಗೂ ಶಿಕ್ಷಾರ್ಥಿ ವೇತನವನ್ನೂ ನೀಡಲಾಗುತ್ತದೆ. ತರಬೇತಿ ಮುಗಿದ ನಂತರ ಅವರು ಹಾಸ್ಪೀಸಿನಲ್ಲಿ ಆರೈಕೆ ನೀಡುವವರಾಗಿ ಉದ್ಯೋಗವನ್ನು ಪಡೆಯುತ್ತಾರೆ. ಇಂದಿನವರೆಗೂ 22 ತಂಡಗಳ ತರಬೇತಿ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ.
ಆಡಳಿತ ಮಂಡಳಿ
ಟ್ರಸ್ಟ್‌ನ ಪದಾಧಿಕಾರಿಗಳು

ಕರುಣಾಶ್ರಯದ ಕಾರ್ಯ ತಂಡ


ಕರುಣಾಶ್ರಯವು ಸಮರ್ಥ ಹಾಗು ಸುಶಿಕ್ಷಿತ ವೈದ್ಯರು, ದಾದಿಯರು, ಸಲಹೆಗಾರರು, ಸಮಾಜ ಸೇವೆ ಕಾರ್ಯಕರ್ತರು, ಚಿಕಿತ್ಸಕರ ತಂಡವಲ್ಲದೆ ಸ್ವಯಂಸೇವಕರು, ಚ್ಯಾರಿಟಿ ವಕ್ತಾರರು ಮತ್ತು ಸಹಾಯಕ ಸಿಬ್ಬಂದಿವರ್ಗವನ್ನು ಒಳಗೊಂಡಿದೆ.
ಕರುಣಾಶ್ರಯವು ಬೆಂಗಳೂರು ಹಾಸ್ಪೀಸ್ ಟ್ರಸ್ಟ್ – BHT (ಬೆಂಗಳೂರು ವಿಶ್ರಾಂತಿಧಾಮ ಟ್ರಸ್ಟ್) ನ ಒಂದು ಅಂಗಸಂಸ್ಥೆಯಾಗಿದೆ ಮತ್ತು ಅದರ ಆಡಳಿತವನ್ನು ಅಧ್ಯಕ್ಷರು ಹಾಗು ವ್ಯವಸ್ಥಾಪಕ ಟ್ರಸ್ಟೀರವರು ವಹಿಸಿಕೊಂಡಿದ್ದಾರೆ. ಸಂಸ್ಥೆಯ ಟ್ರಸ್ಟಿಗಳೆಲ್ಲರೂ ಭಾರತೀಯ ಕ್ಯಾನ್ಸರ್ ಸೊಸೈಟಿಯ (ಕರ್ನಾಟಕ ಅಧ್ಯಾಯ) ಮತ್ತು ಬೆಂಗಳೂರು ಇಂದಿರಾನಗರದ ರೋಟರಿ ಕ್ಲಬ್ ನ ಸಮಾನ ಪ್ರಾತಿನಿಧ್ಯ ಹೊಂದಿರುತ್ತಾರೆ. ಕರುಣಾಶ್ರಯದ ವೈದ್ಯಕೀಯ ನಿರ್ದೇಶಕರು, ಮಾರ್ಗದರ್ಶಕರು, ಉಪಶಮನಕಾರಿ ಚಿಕಿತ್ಸಾ ಕ್ಷೇತ್ರದ ಶಿಕ್ಷಣ ಮತ್ತು ಸಂಶೋಧನಾ ವಿಭಾಗಗಳಲ್ಲಿ ಉನ್ನತ ಮಟ್ಟದ ಕೊಡುಗೆಗಳನ್ನು ನೀಡಿರುತ್ತಾರೆ, ಮತ್ತು ಈ ಕ್ಷೇತ್ರದ ಉನ್ನತಿಗೆ ಸತತವಾಗಿ ಕೆಲಸವನ್ನು ಮಾಡುತ್ತಿರುತ್ತಾರೆ. ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆಗೆ ವಿವಿಧ ವಿಭಾಗಗಳ (ಹಿರಿಯ ವೈದ್ಯಕೀಯ ಅಧಿಕಾರಿ, ಹಣಕಾಸು ವಿಭಾಗದ ಮುಖ್ಯಸ್ತರು, ಸಾರ್ವಜನಿಕ ಸಂಪರ್ಕ ಅಧಿಕಾರಿ ಮತ್ತು ಮಾನವ ಸಂಪನ್ಮೂಲ ವಿಭಾಗಗಳ) ಮುಖ್ಯಸ್ಥರು ನಿಗದಿಗೊಂಡಿರುತ್ತಾರೆ.
ನೀತಿ ಸಮಿತಿ
ಕರುಣಾಶ್ರಯದ ನೀತಿ ಸಮಿತಿಯು ಪರಿಣಿತಿ ಹೊಂದಿದ ಹೊರಗಿನ ವೈದ್ಯರು, ಪ್ರಾಜ್ಞರು ಮತ್ತು ಸಮಾಜದ ಗೌರವಾನ್ವಿತರನ್ನು ಒಳಗೊಂಡಿದೆ. ಈ ಸಮಿತಿಯು ತನ್ನ ಬಳಿ ಬರುವ ಸಂಶೋಧನಾ ಪ್ರಸ್ತಾಪಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸುವುದಲ್ಲದೇ, ಕಾರ್ಯಗತವಾಗುತ್ತಿರುವ ಯೋಜನೆಗಳಿಗೆ ಬೆಂಬಲ ನೀಡುತ್ತದೆ. ಹೊರಗಿನ ಸಂಶೋಧಕರಿಗೆ ಮತ್ತು ಹಳೆಯ ವಿದ್ಯಾರ್ಥಿಗಳಿಗೆ ಅವರ ಸಂಶೋಧನೆಗೆ ಸಮಿತಿಯು ಉಚಿತ ಸಲಹೆ ನೀಡುತ್ತದೆ.
- ಶ್ರೀ. W. ಮಹೇಂದ್ರನ್ ಸುಂದರಮೂರ್ತಿ B.A. LLB.ವಕೀಲರು
- Dr. ಪೂರ್ಣಿಮ ಭೋಲ ಸಹಾಯಕ ಪ್ರಾಚಾರ್ಯರು
- Dr. G. D. ರವೀಂದ್ರನ್ ಔಷದಿಗಳ ಪ್ರಾಧ್ಯಾಪಕರು
- Dr. ಸಂಜಯ್ ಪೈ ಸಮಾಲೋಚಕ ರೋಗಶಾಸ್ತ್ರಜ್ಞ
- Dr. A V S. ಶ್ರೀಕಾಂತ್ MBBS, ಫೋರೆನ್ಸಿಕ್ ಮೆಡಿಸಿನ್ ಡಿಪ್ಲೋಮಾ ಮತ್ತು ಕ್ಲಿನಿಕಲ್ ರಿಸರ್ಚ್ ಡಿಪ್ಲೋಮಾ
- ಶ್ರೀ. A ವಿಜಯರಾಜನ್ BE, ME, MBA
- Dr. ಕ್ರಿಷ್ ಕಲ್ಯಾಣ್ B.Sc, B.Pharm, Ph.D (Lond), F.R.I.C., C. Chem, F.R.S.H
- Dr. ಸುಶೀಲಾ ಮೆನನ್ MBBS, DVD
- Dr. M. M. ಶ್ರೀನಿವಾಸ್ ಭಾರತ್ Additional Professor, Department of NeuroChemistry, NIMHANS
- Dr. ಸ್ಟಾನ್ಲಿ ಮಕಾದನ್ MBBS, MRCP (UK)
- ಶ್ರೀಮತಿ. ಶುಭಾಷಿಣಿ ಚಲಂ BA, PGDBM (MBA ಸಮಾನಾಂತರ)
- ಶ್ರೀಮತಿ. B. ಶೀಲಾ ಆನಂದ ಕುಮಾರ್ MA (SW)
- ಶ್ರೀ. ಮ್ಯಾಥ್ಯೂ ಜಾರ್ಜ್ ಚಾಂಡಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕರುಣಾಶ್ರಯ
ಲೆಕ್ಕಪರಿಶೋಧಕರು
ಹೊರಗಿನ ಲೆಕ್ಕಪರಿಶೋಧಕರು
- ವರ್ಮಾ ಮತ್ತು ವರ್ಮಾ, ಚಾರ್ಟರ್ಡ್ ಅಕೌಂಟೆಂಟ್ಸ್
- # 424, 4ನೇ C ಮುಖ್ಯ ರಸ್ತೆ, 6ನೇ ಅಡ್ಡ ರಸ್ತೆ,
- OMBR ಬಡಾವಣೆ, ಬಾಣಸವಾಡಿ,
- ಬೆಂಗಳೂರು 560043,
- ಕರ್ನಾಟಕ, ಭಾರತ
- ದೂರವಾಣಿ : +91 80 42444999Fax: +91 80 42444900
ಆಂತರಿಕ ಲೆಕ್ಕಪರಿಶೋಧಕರು
- ಕ್ರೆಸ್ಟ್ ವರ್ತ್ ಮ್ಯಾನೇಜ್ ಮೆಂಟ್ ಪಾರ್ಟ್ನರ್ಸ್ ಪ್ರೈವೇಟ್ ಲಿಮಿಟೆಡ್ (ಹಿಂದಿನ ಹೆಸರು, ಆಗಿಲಿಸ್ ಕನ್ಸಲ್ಟೆಂಟ್ಸ್ [ಕರ್ನಾಟಕ] ಪ್ರೈವೇಟ್ ಲಿಮಿಟೆಡ್)
- 36, “ರೇವೆ ಪಬ್ಬತ್ತಿ”, 3ನೇ ಮಹಡಿ,
- ಸೌತ್ ಎಂಡ್ ರಸ್ತೆ, ಬಸವನಗುಡಿ,
- ಬೆಂಗಳೂರು – 560 004
- ಕರ್ನಾಟಕ, ಭಾರತ
- ದೂರವಾಣಿ ಸಂಖ್ಯೆ: 080-26771615ಮೊಬೈಲ್ ದೂರವಾಣಿ ಸಂಖ್ಯೆ: 9742319722
ಚಾರಿಟಿ ಶಾಪ್
ನಿಮ್ಮ ಸಣ್ಣ ಖರೀದಿಯು ದೊಡ್ಡ ವ್ಯತ್ಯಾಸವನ್ನುಂಟು ಮಾಡುವ ಸ್ಥಳ.
ಸಮುದಾಯದ ಜನರನ್ನು ಒಟ್ಟುಗೂಡಿಸಲು ಕರುಣಾಶ್ರಯವು ಒಂದು ಚಾರಿಟಿ ಶಾಪ್ ಅನ್ನು ಪ್ರಾರಂಭಿಸಿದೆ. ಸುತ್ತ ಮುತ್ತಲಿನ ನಾಗರೀಕ ಭಾಂದವರ ಕಡೆಯಿಂದ ಬಳಸಿ ಉಳಿಸಿದ ಸಾಮಾನು ಮತ್ತು ಸರಂಜಾಮುಗಳನ್ನು ಸಂಗ್ರಹಿಸಿ ಲಾಭದ ಅಪೇಕ್ಷೆಯಿಲ್ಲದೆ ಅವುಗಳ ಮಾರಾಟವನ್ನು ಮಾಡುತ್ತಾ ಬಂದಿದೆ.
ವಿಶ್ರಾಂತಿ ಕೇಂದ್ರದಲ್ಲಿನ ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗುವಂತೆ, ಸಂಗ್ರಹಿಸಲಾದ ಸಾಮಾನು ಮತ್ತು ಸರಂಜಾಮುಗಳನ್ನು ಮಾರಾಟ ಮಾಡಲಾಗುತ್ತಿದೆ. ಒಳ್ಳೆ ಗುಣಮಟ್ಟದ ಈ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಗ್ರಾಹಕರೂ ಮತ್ತು ಕರುಣಾಶ್ರಯದ ನಡುವೆ ಒಂದು ಸಂವಹನದ ಕಿಟಕಿಯನ್ನು ತೆರೆಯಲಾಗಿದೆ.
ಸಾಮಾನ್ಯವೆನಿಸುವ ಈ ವ್ಯವಸ್ಥೆ ಸಂಘಟನೆಗೆ ಸಾಕಷ್ಟು ಬಹುಮುಖೀ ಪ್ರಯೋಜನಗಳನ್ನು ನೀಡಿದೆ. ಕರುಣಾಶ್ರಯವು ರೋಗಿಗಳಿಗೆ ಅಗತ್ಯವಾದ ಸೇವೆಗಳನ್ನು ಒದಗಿಸುತ್ತಿದ್ದ ಈ ವ್ಯವಸ್ಥೆಯು ಪರಿಸರವಾದಿಗಳಿಗೂ ಲಾಭವಾಗಿ ಪರಿಣಮಿಸಿದೆ. ಮರುಬಳಕೆಯಾಗುವಂತಹ ನೈಸರ್ಗಿಕ ಸಂಪನ್ಮೂಲಗಳು ಬಹುತೇಕ ಪರಿಸರ ಸ್ನೇಹಿ ಪದಾರ್ಥಗಳಾಗಿದ್ದು ಅವುಗಳ. ಮರುಬಳಕೆ ಪರಿಸರ ಸ್ನೇಹಿ ಮಾತ್ರವಾಗಿರುವುದಲ್ಲದೆ, ಅವುಗಳದರ ಸದ್ಬಳಕೆಯಾಗುತ್ತಿರುವುದೂ ಸಹ ಸಂಘಟನೆಯ ಹೆಮ್ಮೆಯ ಸಾಧನೆಯಾಗಿದೆ.
ಕರುಣಾಶ್ರಯವು ನಾಗರೀಕರಿಂದ ಈ ಕೆಳಕಂಡ ಸಾಮಗ್ರಿಗಳನ್ನು ಮರುಬಳಕೆಗೆಂದು ಪಡೆಯುತ್ತದೆ.
- ಬಟ್ಟೆ (ಹೊಸದು ಅಥವ ಶುಭ್ರ/ಸ್ವಚ್ಛವಾಗಿರುವ ಉಪಯೋಗಿಸಿದ ಬಟ್ಟೆಗಳು),
- ಪೀಠೋಪಕರಣಗಳು
- ಪರಿಕರಗಳು (ಚೀಲಗಳು, ಆಭರಣಗಳು)
- ಸ್ನಾನಗೃಹ ಸಾಮಗ್ರಿಗಳು (ಸೋಪು, ಶ್ಯಾಂಪೂ ಇತ್ಯಾದಿ)
- ಹಾಸಿಗೆ, ಮೇಲು ಹೊದಿಕೆ, ದಿಂಬುಗಳು
- ಎಲೆಕ್ಟ್ರಾನಿಕ್ಸ್ ಉಪಕರಣಗಳು
- ಅಡುಗೆ ಮನೆ ಪರಿಕರಗಳು ಸಾಮಗ್ರಿಗಳು
- ಪುಸ್ತಕ, ಲೇಖನಿ ಇತ್ಯಾದಿಗಳು
- ವರ್ಣಚಿತ್ರಗಳು
- ಕಲಾಕೃತಿಗಳು
- ಸೈಕಲ್
- ಆಟದ ಸಾಮಾನುಗಳು / ಮನೆಯ ಆಟಗಳು
ಮೇಲಿನ ಎಲ್ಲಾ ಸಾಮಗ್ರಿಗಳನ್ನು ಅವುಗಳ ಮೂಲ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಮಾರಾಟಮಾಡಲಾಗುವುದು. ಪ್ರತೀ ಸಾಮಾನಿನ ಗುಣಮಟ್ಟವನ್ನು ಅನುಸರಿಸಿ ಅವುಗಳ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ಕೊಂಡ ಗ್ರಾಹಕರು ಅವುಗಳನ್ನು ಬಳಸುವುದನ್ನು ಗಮನದಲ್ಲಿಟ್ಟುಕೊಂಡು ಅದರ ಗುಣಮಟ್ಟವನ್ನು ಖಾತ್ರಿಪಡಿಸಲಾಗುತ್ತದೆ. ಹರಿದ ಅಥವ ಹಾಳಾದ ವಸ್ತುಗಳನ್ನು ಸ್ವೀಕರಿಸಲಾಗುವುದಿಲ್ಲ.
ನಾಗರೀಕರಿಂದ ಸ್ವೀಕರಿಸಲ್ಪಡುವ ಬಟ್ಟೆಗಳಲ್ಲಿ ಯಾವುದೇ ತರಹದ ದೋಷಗಳಿರಬಾರದು, ಸ್ವೀಕರಿಸಿದ ಎಲ್ಲಾ ಸಾಮಗ್ರಿಗಳೂ ಮರುಬಳಕೆ ಮಾಡಲು ಸೂಕ್ತವಾಗಿರಬೇಕು. ಪಠ್ಯಪುಸ್ತಕಗಳನ್ನು ಹೊರತುಪಡಿಸಿ, ಮಕ್ಕಳ ಚಿತ್ರಕಥಾ ಪುಸ್ತಕಗಳು, ಹಿರಿಯರು ಓದುವಂತಹ ಪುಸ್ತಕಗಳನ್ನು ತಲುಪಿಸಬಹುದು.
ಪ್ರಶಸ್ತಿಗಳು ಮತ್ತು ಸಾಧನೆಗಳು
ರೋಗಿಗಳೇ ಉಪಶಮನಕಾರಿ ಚಿಕಿತ್ಸೆಗೆ ಮಾದರಿ, ಅವರ ಮನಸ್ಸಿಗೆ ಹಿತವಾಗುವಂತಹ ರೋಗ ನಿವಾರಕ ವಾತಾವರಣವನ್ನು ಉಂಟುಮಾಡುವುದು ಕರುಣಾಶ್ರಯದ ಗುರಿ. ಈ ನಿಟ್ಟಿನಲ್ಲಿ ನಿರಂತರವಾಗಿ ನಿಷ್ಢೆ ಮತ್ತು ಬದ್ಧತೆಯಿಂದ ಕರುಣಾಶ್ರಯವು ಸಮಾಜಕ್ಕೆ ಸಲ್ಲಿಸುತ್ತಿರುವ ನಿಜವಾದ ಅರ್ಥದ ಸೇವೆಯನ್ನು ಪುರಸ್ಕರಿಸಿ ಸಂಸ್ಥೆಗೆ ಸಾಕಷ್ಟು ಪ್ರಶಂಸಾ ಪತ್ರಗಳು ಹಾಗೂ ಪ್ರಶಸ್ತಿಗಳು ದೊರೆತಿವೆ. ಅವುಗಳಲ್ಲಿ ಕೆಲವು;
ಭಾರತದ ಮಾಜಿ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ರಾಜೇಂದ್ರ ಬಾಬುರವರಿಂದ ಬೆಂಗಳೂರು ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ರವರ ಸರ್ವೀಸ್ ಟು ಹ್ಯೂಮಾನಿಟಿ ಅವಾರ್ಡ್ – 2016.
ಅಮೇರಿ ಕೇರ್ಸ್ ಇಂಡಿಯಾ ಫೌಂಡೇಶನ್ ವತಿಯಿಂದ ಆರೋಗ್ಯ ವಿಭಾಗದಲ್ಲಿ ಸ್ಪಿರಿಟ್ ಆಫ್ ಹ್ಯೂಮಾನಿಟಿ ಅವಾರ್ಡ್ – 2016 ಮುಂಬಯಿಯಲ್ಲಿ ನೀಡಲಾಯಿತು.
ನಮ್ಮ ಬೆಂಗಳೂರು ಅವಾರ್ಡ್, 2015 ರಲ್ಲಿ – ಸನ್ಮಾನ್ಯ ಕಿಶೋರ್ ರಾವ್, ಅಧ್ಯಕ್ಷರು BHT- ಕರುಣಾಶ್ರಯ ರವರಿಗೆ ವರ್ಷದ ನಾಗರೀಕ ವ್ಯಕ್ತಿ ಪ್ರಶಸ್ತಿ – 2015
BHT – ಕರುಣಾಶ್ರಯ ಸಂಸ್ಥೆ ಬೆಂಗಳೂರಿಗೆ ನೀಡಿರುವ ಕೊಡುಗೆಯನ್ನು ಮಾನ್ಯತೆಗೊಳಿಸಿ ರೇಡಿಯೋ ಒನ್ 94.3 ಸಂಸ್ಥೆಯಿಂದ ಬೆಂಗಳೂರು ಅಟ್ ಇಟ್ಸ್ ಬೆಸ್ಟ್ ಅವಾರ್ಡ್ – 2016
ನಮ್ಮ ಬೆಂಗಳೂರು ಅವಾರ್ಡ್ 2011 ರಲ್ಲಿ BHT – ಕರುಣಾಶ್ರಯಕ್ಕೆ ಅತ್ಯುತ್ತಮ ಸಾಮಾಜಿಕ ಸಂಸ್ಥೆ ಪ್ರಶಸ್ತಿ -2012
R.V.M. ಪ್ರತಿಷ್ಠಾನವು – BHT- ಕರುಣಾಶ್ರಯ ಮಾಡಿರುವ ಸಾಮಾಜಿಕ ಮತ್ತು ಮಾನವೀಯ ಸೇವೆಗಳನ್ನ ಗುರುತಿಸಿ ಹ್ಯೂಮ್ಯಾನಿಟೇರಿಯನ್ ಹ್ಯಾಂಡ್ಸ್ ಮಾನ್ಯತೆ – 2010
ಸೀನಿಯರ್ ಸಿಟಿಜನ್ ಕ್ಲಬ್ (ಕೇಂದ್ರ ಸರ್ಕಾರದ ಸೇವೆ) ವತಿಯಿಂದ BHT- ಕರುಣಾಶ್ರಯಕ್ಕೆ ಪದ್ಮಭೂಷಣ ಡಾ. M.C. ಮೋದಿ ಅವಾರ್ಡ್ – 2004
ಕ್ಯಾನ್ಸರ್ ರೋಗಿಗಳಿಗೆ ನೀಡಿದ ಅತ್ಯುನ್ನತ ಸೇವೆಗಾಗಿ BHT – ಕರುಣಾಶ್ರಯಕ್ಕೆ ಕರ್ನಾಟಕ ಸರಕಾರದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
BHT – ಕರುಣಾಶ್ರಯ ಕ್ಯಾನ್ಸರ್ ರೋಗಿಗಳಿಗೆ ನೀಡುತ್ತಿರುವ ಸಹಾನುಭೂತಿ ಮತ್ತು ಸೇವೆಯನ್ನು ಗುರುತಿಸಿ ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಅಂಡ್ ಎಜುಕೇಶನ್ ಸಂಸ್ಥೆ ಮಂಗಳೂರು ರವರಿಂದ ವಿಶೇಷ ಪ್ರಾತ್ಯಕ್ಷಿಕಾ ಪ್ರಶಸ್ತಿ – 2002
ವೃತ್ತಿಜೀವನ
- ಸೌಲಭ್ಯಗಳ ವ್ಯವಸ್ಥಾಪಕ
- ಹಣಕಾಸು ಮತ್ತು ಮಾನವ ಸಂಪನ್ಮೂಲ – ನಿರ್ವಹಣೆ
- ಉಪಶಾಮಕ ಆರೈಕೆ ವೈದ್ಯರು (ಉದ್ಯೋಗಾವಕಾಶಗಳು ಲಭ್ಯವಿದೆ)
- ನರ್ಸಿಂಗ್ ಸಹಾಯಕ (ಉದ್ಯೋಗಾವಕಾಶಗಳು ಲಭ್ಯವಿದೆ)
- ಸ್ಟಾಫ್ ನರ್ಸ್ (ಉದ್ಯೋಗಾವಕಾಶಗಳು ಲಭ್ಯವಿದೆ)
- ಸಲಹೆಗಾರರು
- ಭೌತಚಿಕಿತ್ಸಕ
- ಔಷಧ ಜ್ಞಾನಿ
- ಮನೆಗೆಲಸ
- ಅಡುಗೆಯವರು
- ತೋಟಗಾರರು